ದೇವಸ್ಥಾನದ ಅರ್ಚಕ ಸಹಿತ ಮೂವರಿಂದ ಮಹಿಳೆಯ ಸಾಮೂಹಿಕ ಅತ್ಯಾಚಾರ

0
176
Tap to know MORE!

ಉತ್ತರಪ್ರದೇಶ: ದೇವಸ್ಥಾನಕ್ಕೆ ತೆರಳಿದ್ದ 50 ವರ್ಷದ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡಿ, ವಿಕೃತವಾಗಿ ಕೊಲೆಗೈದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬದೌನ್ ಜಿಲ್ಲೆಯ ಉಘೈಟಿ ಗ್ರಾಮದಲ್ಲಿ ಜ.3ರಂದು ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಮಹಿಳೆ ಜ.3ರಂದು ಸಂಜೆ ದೇವಸ್ಥಾನಕ್ಕೆ ತೆರಳಿದ್ದರು. ಆದರೆ, ದೇಗುಲಕ್ಕೆ ತೆರಳಿದ್ದ ಮಹಿಳೆ ಬಂದಿರಲಿಲ್ಲ. ಮರುದಿನ ದೇವಸ್ಥಾನದ ಅರ್ಚಕ ಮತ್ತು ಇತರ ಇಬ್ಬರು ಸೇರಿ ಮಹಿಳೆಯ ಶವವನ್ನು ಆಕೆಯ ಮನೆಗೆ ತಂದು ಇರಿಸಿದ್ದಾರೆ.

ಈ ಬಗ್ಗೆ ಮನೆಯವರು ಕೇಳಿದಾಗ, ಮಹಿಳೆ ದೇವಸ್ಥಾನದ ಬಳಿಯ ಬಾವಿಗೆ ಬಿದ್ದಿದ್ದಳು. ರಕ್ಷಣೆಗಾಗಿ ಬೊಬ್ಬೆ ಹಾಕಿದ್ದು ನಾವು ಹೋಗಿ ರಕ್ಷಿಸಲು ಪ್ರಯತ್ನಿಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಮಹಿಳೆಯ ಮನೆಯವರ ನಂಬರ್ ಏನೂ ಇರಲಿಲ್ಲ. ಹೀಗಾಗಿ ಶವ ತಂದಿದ್ದೇವೆ ಎಂಬುದಾಗಿ ಅರ್ಚಕ ಹೇಳಿದ್ದಾಗಿ ಮಹಿಳೆಯ ಮಗ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಮನೆಯವರ ಹಾಗೂ ಊರ ಗ್ರಾಮಸ್ತರ‏‍ ಆಕ್ರೋಶ ಕೇಳಿಬಂದ ಕಾರಣ ಪೊಲೀಸರು ಶವವನ್ನು ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈದಿದ್ದಲ್ಲದೆ, ಗುಪ್ತಾಂಗ ಮತ್ತು ಕಾಲುಗಳಿಗೆ ಗಾಯಗೊಳಿಸಿರುವುದು ಕಂಡುಬಂದಿದೆ.

ವರದಿಯ ಬಳಿಕ ಮಹಿಳೆಯ ಗ್ಯಾಂಗ್ ರೇಪ್ ಮತ್ತು ಕೊಲೆಗೈದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬ ನೀಡಿದ ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಕರಣ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಧೌನ್ ಜಿಲ್ಲೆಯ ಎಸ್ಪಿ ಸಂಕಲ್ಪ್ ಶರ್ಮಾ, ಘಟನೆಯ ತನಿಖೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.‍

LEAVE A REPLY

Please enter your comment!
Please enter your name here