ನವದೆಹಲಿ: ಕೊಂಕಣಿ ಅಕಾಡೆಮಿ ಸ್ಥಾಪಿಸಲು ಕೇಜ್ರಿವಾಲ್ ಸಂಪುಟ ಅನುಮೋದನೆ

0
102
Tap to know MORE!

ನವದೆಹಲಿ ಜ.9: ‘ಕೊಂಕಣಿ ಭಾಷೆಯನ್ನು ಇಷ್ಟಪಡುವ ಮತ್ತು ಮಾತನಾಡುವ ಎಲ್ಲರಿಗೂ ಅಭಿನಂದನೆಗಳು. ಕೊಂಕಣಿ ಭಾಷೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದೆಹಲಿಯಲ್ಲಿ ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸಲು ದೆಹಲಿ ಸಚಿವ ಸಂಪುಟ ಅನುಮೋದನೆ ನೀಡಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪಿಸಲು ದೆಹಲಿ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: ದೆಹಲಿ : ಜೆಎನ್‌ಯು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಕೊಂಕಣಿ ಇಂಡೊ-ಆರ್ಯನ್ ಭಾಷೆಯಾಗಿದ್ದು, ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪ್ರಸ್ತಾಪಿಸಿರುವ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ಇದು ಗೋವಾದ ಅಧಿಕೃತ ಭಾಷೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಗೋವಾ ಚುನಾವಣೆ ಮೇಲೆ ಆಮ್ ಆದ್ಮಿ ಕಣ್ಣು?

ಮುಂದೆ ಎದುರಾಗಲಿರುವ ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರದ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಕೊಂಕಣಿ ಭಾಷೆಯು ದೇಶದ ಪಶ್ಚಿಮ ಕರಾವಳಿ ಯಲ್ಲಿ ಹೆಚ್ಚು ಭಾಷಿಕರನ್ನು ಹೊಂದಿದೆ. ಅದಲ್ಲದೆ ಗೋವಾ ರಾಜ್ಯದ ರಾಜ್ಯ ಭಾಷೆಯೂ ಆಗಿದ್ದು, ಕೇಜ್ರಿ ಸಂಪುಟದ ಈ ನಿರ್ಧಾರ ಬಹುವಾಗಿ ಚರ್ಚೆಯಾಗುತ್ತಿದೆ.

ಕೆಜಿಎಫ್ ಪ್ರಚಾರ : ಚಿತ್ರತಂಡದಿಂದ ಬಿಡುಗಡೆ ಆಯ್ತು “ಕೆಜಿಎಫ್ ಟೈಮ್ಸ್” ಪತ್ರಿಕೆ

LEAVE A REPLY

Please enter your comment!
Please enter your name here