ತೋಕೂರು: ಯೆನೆಪೋಯ ವಿವಿ ವತಿಯಿಂದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ

0
185
Tap to know MORE!

ತೋಕೂರು: ಸರಕಾರಿ ಶಾಲೆಗಳ ಪ್ರಗತಿಗೆ ಮುಕ್ತ ಸಹಕಾರ ನೀಡುವ ಮೂಲಕ ಶಿಕ್ಷಣದ ಮೌಲ್ಯಕ್ಕೆ ಧಕ್ಕೆಯಾಗದೇ, ವಿದ್ಯಾರ್ಥಿಗಳ ಮೂಲ ಸೌಕರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.

ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ ಕ್ಲಬ್‌ನ ಸಂಯೋಜನೆಯಲ್ಲಿ ಯೆನೋಪೋಯ ವಿಶ್ವವಿದ್ಯಾನಿಲಯದಿಂದ ಸರಕಾರಿ ಶಾಲೆಗೆ ಉಚಿತ ಕಂಪ್ಯೂಟರ್‌ಅನ್ನು ಕೊಡುಗೆ ನೀಡಲಾಯಿತು. ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ತೋಕೂರು: ಉದ್ಯೋಗ ಖಾತರಿ ಯೋಜನೆಯ ಅಡಿ ನೀರು ಉಳಿಸಲು ಅಡ್ಡ ಹಲಗೆ ಹಾಕುವ ಕಾರ್ಯ

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ನ ಸಂಯೋಜನೆಯಲ್ಲಿ ಮಂಗಳೂರಿನ ಯೆನೋಪೋಯ ವಿಶ್ವವಿದ್ಯಾನಿಲಯದ ದಂತವೈದ್ಯ ಚಿಕಿತ್ಸಾ ಘಟಕದ ಮೂಲಕ ಕಂಪ್ಯೂಟರ್ನ್ನು ವಿತರಿಸಲಾಯಿತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಯೆನೋಪೊಯ ಶಿಕ್ಷಣ ಸಂಸ್ಥೆಯ ಸೂಪರಿಡೆಂಟ್ ಪ್ರವೀಣ್ಕುಮಾರ್, ಸಾರ್ವಜನಿಕ ಸಂಪಕರ್ಾಧಿಕಾರಿ ಭರತ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಮೋಹನ್ದಾಸ್, ಸ್ಪೋಟ್ಸರ್್ ಕ್ಲಬ್ನ ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ, ಸಿಆರ್ಪಿ ಕುಸುಮಾ . ಗೌರವ ಶಿಕ್ಷಕಿಯರಾದ ಮೋಹಿನಿ, ವಾಣಿಶ್ರೀ, ಯಶವಂತಿ,  ಎಸ್.ಡಿ. ಮ್. ಸಿ. ಉಪಾಧ್ಯಕ್ಷರು ಶ್ರೀಮತಿ ಶಂಕರಿ, ಏಳನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು,  ಸಂಸ್ಥೆಯ ಉಪಾಧ್ಯಕ್ಷರು ಶ್ರೀ ದೀಪಕ್ ಸುವರ್ಣ, ಕೋಶಾಧಿಕಾರಿ ಸಂಪತ್ ದೇವಾಡಿಗ, ಮಾಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಮೀಳಾ. ಕೆ. ದೇವಾಡಿಗ, ಶ್ರೀಮತಿ ಸುಜಾತಾ. ಜಿ. ಕೆ., ಶ್ರೀಮತಿ ಶೋಭಾ ವಿ. ಅಂಚನ್, ಶಾಲೆಯ ಅಡುಗೆ ಸಿಬ್ಬಂದಿಯರಾದ ಶ್ರೀಮತಿ ಶೈಲಜ, ಶ್ರೀಮತಿ ಪ್ರೇಮಾ, ಮತ್ತಿರರು ಉಪಸ್ಥಿತರಿದ್ದರು.

ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಸಂತೋಷ್ ದೇವಾಡಿಗ ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕಿ ಗೌರಿ ನಿರೂಪಿಸಿದರು.

https://suddivani.com/9946-2/

LEAVE A REPLY

Please enter your comment!
Please enter your name here