ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ದ ವತಿಯಿಂದ ‘ಸಾಹಿತ್ಯ ಮತ್ತು ಸ್ವಾವಲಂಬಿ ಕೃಷಿ’ ಎಂಬ ವಿಚಾರದ ಮೇಲೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಯನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕರಾದ ಡಾ. ರಾಘವೇಂದ್ರ ರಾವ್ ಆಗಮಿಸಿ. ಪ್ರಾತ್ಯಕ್ಷಿಕೆ ಮೂಲಕ ವಿಚಾರವನ್ನು ಮಂಡಿಸಿದರು. ಇಂದಿನ ತರಾತುರಿ ಮತ್ತು ಗಡಿಬಿಡಿಯ ಬದುಕಿನಲ್ಲಿ ಸ್ವಾವಲಂಬಿ ಕೃಷಿ ನೀಡುವ ಸಂತೋಷವನ್ನು ಸಾಧಕ ಕೃಷಿಕರ ಪರಿಚಯದೊಂದಿಗೆ ವಿವರಿಸಿ, ಸ್ವಾವಲಂಬಿ ಕೃಷಿಯತ್ತ ಇಂದಿನ ಯುವಕರು ಚಿತ್ತವನ್ನು ಹರಿಸುತ್ತಿರುವ ಆಶಾದಾಯಕ ಬೆಳವಣಿಗೆಯನ್ನು ಹೇಳಿದರು.
ವೇದಿಕೆಯ ಸಂಯೋಜಕರಾದ ಡಾ ಕೃಷ್ಣ ರಾಜ ಕರಬ ಎಲ್ಲರನ್ನೂ ಪ್ರಸ್ತಾವನೆ ಮಾಡಿದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಯೋಗೀಶ್ ಕೆ ಮಾತನಾಡಿದರು.ವಿದ್ಯಾರ್ಥಿ ಸುಕುಮಾರ ಕಾರ್ಯಕ್ರಮ ನಿರೂಪಿಸಿ ವೈಶಾಕ್ ಸ್ವಾಗತಿಸಿ, ಉಮಾಶ್ರೀ ವಂದನೆ ಸಲ್ಲಿಸಿದರು