ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿದ ಅಭಾವಿಪ

0
74

ಮೂಡುಬಿದಿರೆ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡುಬಿದಿರೆ ವತಿಯಿಂದ ರಕ್ಷಾ ಬಂಧನ ಉತ್ಸವದ ಆಚರಣೆ ನಡೆಯಿತು. ಸ್ನೇಹ , ಸಹಕಾರ , ಸಹೋದರತ್ವವನ್ನು ಸಾರುವ ರಕ್ಷಾಬಂಧನದ ಆಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭ ನಗರದ ಮೆಸ್ಕಾಂ ಘಟಕ ಹಾಗೂ ಅಗ್ನಿಶಾಮಕ ದಳ ಘಟಕಕ್ಕೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಿಗೆ ರಕ್ಷಾ ದಾರವನ್ನು ಕಟ್ಟುವ ಮೂಲಕ ಸಮಾಜಗೋಸ್ಕರ ರಾತ್ರಿ ಹಗಲೆನ್ನದೆ ದುಡಿಯುವ ಸಿಬ್ಬಂದಿಗಳಿಗೆ ಗೌರವ ಸೂಚಿಸಿದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಡುಬಿದಿರೆ ಘಟಕದ ಕಾರ್ಯಕರ್ತರು, ಮೆಸ್ಕಾಂ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here