ಅಹಮದಾಬಾದ್ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 8 ಮಂದಿ ಬಲಿ!

0
126

ಅಹಮದಾಬಾದ್‌ನ ಕೋವಿಡ್ -19 ನಿಯೋಜಿತ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಕನಿಷ್ಠ ಎಂಟು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ, ಈ ಘಟನೆಯಿಂದ ತನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. “ಪರಿಸ್ಥಿತಿಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಜಿ ಮತ್ತು ಮೇಯರ್ ಬಿಜಾಲ್ ಪಟೇಲ್ ಜಿ ಅವರೊಂದಿಗೆ ಮಾತನಾಡಿದ್ದಾರೆ. ಸಂತ್ರಸ್ತರಿಗೆ ಆಡಳಿತವು ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದೆ” ಎಂದು ಅವರು ಹೇಳಿದರು.

ಈಗಾಗಲೇ ತನಿಖೆ ಆದೇಶಿಸಲಾಗಿದೆ

ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಬಲಿಯಾದವರ ಮನೆಗೆ ತಲಾ 2 ಲಕ್ಷ ರೂ. ನೀಡುವ ಬಗ್ಗೆ ಪ್ರಧಾನಿ ಘೋಷಿಸಿದರೆ, ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಏತನ್ಮಧ್ಯೆ, ಈಗಾಗಲೇ ಘಟನೆಯ ತನಿಖೆಗಾಗಿ ಸಿಎಂ ರೂಪಾನಿ ಆದೇಶಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಸಂಗೀತ ಸಿಂಗ್ ಅವರು ತನಿಖೆಯನ್ನು ಮುನ್ನಡೆಸಿದ್ದಾರೆ ಮತ್ತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ಏನಾಯಿತು?

ಗುಜರಾತ್ ನಗರದ ನವರಂಗಪುರ ಪ್ರದೇಶದ ಶ್ರೀ ಆಸ್ಪತ್ರೆಯಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸಾವನ್ನಪ್ಪಿದವರಲ್ಲಿ ಐದು ಪುರುಷರು ಮತ್ತು ಮೂವರು ಮಹಿಳೆಯರಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಇರಿಸಲಾಗಿತ್ತು.

ಸುಮಾರು 40 ಇತರ ರೋಗಿಗಳನ್ನು ಎಸ್‌ವಿಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆಆಸ್ಪಥ

LEAVE A REPLY

Please enter your comment!
Please enter your name here