ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ, ಮಧ್ಯಂತರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ತಮ್ಮ ಹುದ್ದೆಯಲ್ಲಿ “ಮುಂದುವರಿಯಲು ಬಯಸುವುದಿಲ್ಲ” ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?
ಕಾಂಗ್ರೆಸ್ನಲ್ಲಿ ‘ಗಾಂಧಿ ನಾಯಕತ್ವ’ ಕುರಿತಾದ ಚರ್ಚೆಯು ಮತ್ತೊಮ್ಮೆ ಗರಿಗೆದರಿದೆ. ಭಾರತೀಯ ರಾಜಕೀಯದಲ್ಲಿ ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ 23 ಕ್ಕೂ ಹೆಚ್ಚು ಹಿರಿಯ ನಾಯಕರು ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸ್ಥಾನದ ‘ಬದಲಾವಣೆಗಾಗಿ’ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ.
ಕೆಲ ಹಿರಿಯರಿಂದ ಒತ್ತಾಯ!
ಸೋನಿಯಾ ಗಾಂಧಿ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ಕಮಲ್ ನಾಥ್, ಮನಮೋಹನ್ ಸಿಂಗ್, ದಿಗ್ವಿಜಯ್ ಸಿಂಗ್ ರಿಂದ ಒತ್ತಾಯಿಸಿದ್ದಾರೆ. ಅದಲ್ಲದೆ, ದೆಹಲಿ, ರಾಜಸ್ಥಾನ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಘಟಕಗಳು ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ಮನವಿ ಸಲ್ಲಿಸಿದ್ದಾರೆ.