ಅಸ್ಸಾಂ ಪ್ರವಾಹ ಪರಿಹಾರಕ್ಕಾಗಿ ₹1 ಕೋಟಿ ದೇಣಿಗೆ ನೀಡಿದ ನಟ ಅಕ್ಷಯ್ ಕುಮಾರ್!

0
349
Tap to know MORE!

ಬಾಲಿವುಡ್ ನಾಯಕ ನಟ ಅಕ್ಷಯ್ ಕುಮಾರ್, ಅಸ್ಸಾಂನಲ್ಲಿ ಪ್ರವಾಹ ಪರಿಹಾರಕ್ಕಾಗಿ ಒಂದು ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ನಟನ ಔದಾರ್ಯವನ್ನು ಶ್ಲಾಘಿಸಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, “ಅಸ್ಸಾಂ ಪ್ರವಾಹ ಪರಿಹಾರಕ್ಕಾಗಿ 1 ಕೋಟಿ ರೂಪಾಯಿಗಳ ಕೊಡುಗೆಗಾಗಿ ಅಕ್ಷಯ್ ಕುಮಾರ್‌ಜಿ ಗೆ ಧನ್ಯವಾದಗಳು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ನೀವು ಯಾವಾಗಲೂ ಸಹಾನುಭೂತಿ ಮತ್ತು ಬೆಂಬಲವನ್ನು ತೋರಿಸಿದ್ದೀರಿ. ಅಸ್ಸಾಂನ ನಿಜವಾದ ಸ್ನೇಹಿತನಾಗಿ, ಜಾಗತಿಕ ಕ್ಷೇತ್ರದಲ್ಲಿ ನಿಮ್ಮ ಮಹಿಮೆಯನ್ನು ಸಾಗಿಸಲು ದೇವರು ನಿಮಗೆ ಎಲ್ಲಾ ಆಶೀರ್ವಾದಗಳನ್ನು ನೀಡಲಿ ” ಎಂದಿದ್ದಾರೆ.


ಅಧಿಕೃತ ಬಿಡುಗಡೆಯ ಪ್ರಕಾರ, ಬಾಲಿವುಡ್ ನಟ ಕಳೆದ ವರ್ಷ ಪ್ರವಾಹ ಪರಿಹಾರಕ್ಕಾಗಿ 2 ಕೋಟಿ ರೂ.ನ್ನು ದೇಣಿಗೆ ನೀಡಿದ್ದರು.

ಹಿಂದಿನ ವರ್ಷಗಳಂತೆ, ಈ ವರ್ಷವೂ ಅಸ್ಸಾಂ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದು, 22 ಜಿಲ್ಲೆಗಳಲ್ಲಿ 113 ಜನರು ಇದುವರೆಗೆ ಸಾವನ್ನಪ್ಪಿದ್ದಾರೆ. ಅದಲ್ಲದೆ ಭೂಕುಸಿತದಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here