ಮುಖೇಶ್ ಅಂಬಾನಿ ಅವರು ಶ್ರೀಮಂತಿಕೆಯಲ್ಲಿ ಯುರೋಪಿನ ಶ್ರೀಮಂತ ವ್ಯಕ್ತಿಯನ್ನು ಹಿಂದಿಕ್ಕಿದ್ದಾರೆ. ಇದರಿಂದಾಗಿ, ಅವರು ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈ ವರ್ಷ $22 ಬಿಲಿಯನ್ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷರು, ಪ್ರಸ್ತುತ $80.6 ಬಿಲಿಯನ್ ಮೌಲ್ಯವನ್ನು ಹೊಂದಿದ್ದಾರೆ. ಇದು ಫ್ರಾನ್ಸ್ನ ಬರ್ನಾರ್ಡ್ ಅರ್ನಾಲ್ಟ್ಗಿಂತ ಹೆಚ್ಚಿನ ಮೌಲ್ಯವಾಗಿದೆ.
ಫೋರ್ಬ್ಸ್ ರಿಯಲ್ ಟೈಮ್ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನದಲ್ಲಿ ಅಂಬಾನಿ!
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಇತ್ತೀಚಿನ ವಾರಗಳಲ್ಲಿ ಕೆಲವು ದೊಡ್ಡ ಉದ್ಯಮಿಗಳನ್ನು ಮೀರಿಸಿದ್ದಾರೆ – ಎಲೋನ್ ಮಸ್ಕ್ ಮತ್ತು ಆಲ್ಫಾಬೆಟ್ ಇಂಕ್ ಸಹ-ಸಂಸ್ಥಾಪಕರಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್, ಒರಾಕಲ್ ಆಫ್ ಒಮಾಹಾ ಎಂದು ಕರೆಯಲ್ಪಡುವ ವಾರೆನ್ ಬಫೆಟ್ ಇತ್ತೀಚೆಗೆ ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದರು!
ರಿಲಯನ್ಸ್ ಮೂಲತಃ ತೈಲ ಕಂಪೆನಿ. ಕೋವಿಡ್ -19 ರ ಭೀತಿಯ ನಡುವೆ, ತೈಲದ ಬೇಡಿಕೆಯ ಕುಸಿತದಿಂದಾಗಿ ಬೃಹತ್ ಇಂಧನ ಸಾಮ್ರಾಜ್ಯವೇ ಕುಸಿದಿದ್ದರೂ, ಅಂಬಾನಿಯವರು ಡಿಜಿಟಲ್ ಘಟಕವಾದ ಫೇಸ್ಬುಕ್ ಇಂಕ್ ಮತ್ತು ಗೂಗಲ್ ಸೇರಿದಂತೆ ವಿಶ್ವದ ಟಾಪ್ ಕಂಪನಿಗಳಿಂದ ಶತಕೋಟಿ ಹೂಡಿಕೆಗಳನ್ನು ಪಡೆದಿದ್ದರಿಂದ ಅದರ ಷೇರುಗಳು ಮಾರ್ಚ್ಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ.
ಅಂಬಾನಿ ನಿಧಾನವಾಗಿ ಅವರ ಗಮನವನ್ನು ಇ-ಕಾಮರ್ಸ್ನತ್ತ ವರ್ಗಾಯಿಸುತ್ತಿದ್ದು, ಟೆಕ್ ದೈತ್ಯರು ಭಾರತದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ವ್ಯವಹಾರದ ಒಂದು ಭಾಗವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಲು ಮುಂಬರುವ ವರ್ಷಗಳಲ್ಲಿ $10 ಬಿಲಿಯನ್ ಖರ್ಚು ಮಾಡಲಿದೆ ಎಂದು ಗೂಗಲ್ ಈಗಾಗಲೇ ಹೇಳಿದೆ.