ಅಂಡಮಾನ್ ನಿಕೋಬಾರ್ ದ್ವೀಪರಾಷ್ಟ್ರಕ್ಕೆ ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸುವ ಯೋಜನೆ ಉದ್ಘಾಟಿಸಿದ ಮೋದಿ

0
274
ಪ್ರಧಾನಿ ಮೋದಿ, ಕೃಷಿ ವಿಶ್ವವಿದ್ಯಾಲಯ
Tap to know MORE!

ದೇಶದ ಪ್ರಮುಖ ಭೂಭಾಗದಲ್ಲಿನ ನಗರಗಳಲ್ಲಿ ದೊರೆಯುವಂತಹ ವೇಗದ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ದ್ವೀಪರಾಷ್ಟ್ರಗಳಾದ ಅಂಡಮಾನ್ ಹಾಗೂ ನಿಕೋಬಾರ್ ಬಹುಭಾಗಕ್ಕೆ ಒದಗಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರಮೋದಿ ಉದ್ಘಾಟಿಸಿದರು.

ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪರಾಷ್ಟ್ರದ ಬಹುಭಾಗಕ್ಕೆ ವೇಗದ ಇಂಟರ್ನೆಟ್‌ ಸೌಲಭ್ಯ ಕಲ್ಪಿಸಲು ನೆರವಾಗುವಂತಹ ’ಆಪ್ಟಿಕಲ್ ಫೈಬರ್ ಕೇಬಲ್‌’ಯೋಜನೆ ಇದಾಗಿದ್ದು ಚೆನ್ನೈನಿಂದ ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳಿಗೆ (ಸಿಎಎನ್‌ಐ) ಸಾಗರದ ಒಳಗೆ (ಜಲಾಂತರ್ಗಾಮಿ) 2312 ಕಿ.ಮೀ ದೂರದವರೆಗೆ ಆಪ್‌ಟಿಕಲ್‌ ಫೈಬರ್ ಕೇಬಲ್‌ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ ಈ ಯೋಜನೆಗೆ ಡಿ.30,2018ರಂದು ಪ್ರಧಾನಿಯವರು ಅಡಿಪಾಯ ಹಾಕಿದ್ದರು.

ವಿಡಿಯೊ ಲಿಂಕ್‌ ಮೂಲಕ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ’ಚೆನ್ನೈನಿಂದ ಪೋರ್ಟ್‌ ಬ್ಲೇರ್‌, ಪೋರ್ಟ್‌ಬ್ಲೇರ್‌ನಿಂದ ಲಿಟಲ್ ಅಂಡಮಾನ್‌ ಮತ್ತು ನಿಕೊಬಾರ್‌ ಮತ್ತು ಪೋರ್ಟ್‌ ಬ್ಲೇರ್‌ನಿಂದ ಸ್ವರಾಜ್‌ ದೀಪದವರೆಗೆ, ಒಟ್ಟು ದ್ವೀಪರಾಷ್ಟ್ರದಲ್ಲಿ ಇಂದಿನಿಂದ ಈ ಯೋಜನೆಯ ಸೇವೆ ಲಭ್ಯವಾಗಲಿದೆ’ ಎಂದು ಹೇಳಿದರು.

LEAVE A REPLY

Please enter your comment!
Please enter your name here