ದ್ಯುತಿ ಚಾಂದ್, ಇಶಾಂತ್ ಶರ್ಮಾ ಸೇರಿದಂತೆ 27 ಮಂದಿಗೆ ಅರ್ಜುನ ಪ್ರಶಸ್ತಿ

0
123
Tap to know MORE!

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತ ಕ್ರೀಡಾಪಟುಗಳ ಪಟ್ಟಿಯನ್ನು ಭಾರತೀಯ ಕ್ರೀಡಾ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ವೇಗದ ಬೌಲರ್ ಇಶಾಂತ್ ಶರ್ಮಾ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ದೀಪ್ತಿ ಶರ್ಮಾ ಸೇರಿದಂತೆ 27 ಮಂದಿಗೆ ಅರ್ಜುನ್ ಪ್ರಶಸ್ತಿ, ಧರ್ಮೆಂದ್ರಾ ತಿವಾರಿ(ಆರ್ಚರ್), ಪುರುಷೋತಮ್ ರೈ(ಅಥ್ಲೆಟಿಕ್ಸ್ ), ಶಿವ ಸಿಂಗ್(ಬಾಕ್ಸಿಂಗ್), ರೊಮೇಶ್ ಪೋಥನಿಯಾ(ಹಾಕಿ) ಸೇರಿದಂತೆ 8 ಮಂದಿ ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಅರ್ಜುನ ಪ್ರಶಸ್ತಿ ಪುರಸ್ಕೃತರು:
1. ಅತನು ದಾಸ್ (ಬಿಲ್ಲುಗಾರಿಕೆ)
2. ದುತಿ ಚಂದ್ (ಅಥ್ಲೆಟಿಕ್ಸ್)
3. ಸಾತ್ವಿಕ್ ಸೈರಾಜ್ ರಂಕಿರೆಡ್ಡಿ (ಬ್ಯಾಡ್ಮಿಂಟನ್)
4. ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್)
5. ವಿಶೇಶ್ ಭ್ರೀಗುವಾಂಶಿ (ಬಾಸ್ಕೆಟ್ಬಾಲ್)
6. ಮನೀಶ್ ಕೌಶಿಕ್ (ಬಾಕ್ಸಿಂಗ್)
7. ಲೊವ್ಲಿನಾ ಬೋರ್ಗೊಹೈನ್ (ಬಾಕ್ಸಿಂಗ್)
8. ಇಶಾಂತ್ ಶರ್ಮಾ (ಕ್ರಿಕೆಟ್)
9. ದೀಪ್ತಿ ಶರ್ಮಾ (ಕ್ರಿಕೆಟ್)
10. ಸಾವಂತ್ ಅಜಯ್ ಅನಂತ್ (ಕುದುರೆ ಸವಾರಿ)
11. ಸಂದೇಶ್ ಜಿಂಗನ್ (ಫುಟ್ಬಾಲ್)
12. ಅದಿತಿ ಅಶೋಕ್ (ಗಾಲ್ಫ್)
13. ಆಕಾಶ್ದೀಪ್ ಸಿಂಗ್ (ಹಾಕಿ)
14. ದೀಪಿಕಾ (ಹಾಕಿ)
15. ದೀಪಕ್ (ಕಬಡ್ಡಿ)
16. ಕೇಲ್ ಸಾರಿಕಾ ಸುಧಾಕರ್ (ಖೋ ಖೋ)
17. ದತ್ತ ಬಾಬನ್ ಭೋಕನಲ್ (ರೋಯಿಂಗ್)
18. ಮನು ಭಾಕರ್ (ಶೂಟಿಂಗ್)
19. ಸೌರಭ್ ಚೌಧರಿ (ಶೂಟಿಂಗ್)
20. ಮಾಧುರಿಕಾ ಸುಹಾಸ್ ಪಟ್ಕರ್ (ಟೇಬಲ್ ಟೆನ್ನಿಸ್)
21. ಡಿವಿಜ್ ಶರಣ್ (ಟೆನ್ನಿಸ್)
22. ಶಿವ ಕೇಶವನ್ (ಚಳಿಗಾಲದ ಕ್ರೀಡೆ
23. ದಿವ್ಯಾ ಕಕ್ರನ್ (ಕುಸ್ತಿ)
24. ರಾಹುಲ್ ಅವೇರ್ (ಕುಸ್ತಿ)
25. ಸುಯಾಶ್ ನಾರಾಯಣ್ ಜಾಧವ್ (ಪ್ಯಾರಾ-ಈಜು)
26. ಸಂದೀಪ್ (ಪ್ಯಾರಾ-ಅಥ್ಲೆಟಿಕ್ಸ್)
27. ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್)

ದ್ರೋಣಾಚಾರ್ಯ ಪುರಸ್ಕಾರ (ಜೀವಮಾನ ಸಾಧನೆ)
1. ಧರ್ಮೇಂದ್ರ ತಿವಾರಿ-ಬಿಲ್ಲುಗಾರಿಕೆ
2. ಪುರುಷೋತ್ತಮ್ ರೈ- ಅಥ್ಲೆಟಿಕ್ಸ್
3. ಶಿವ್ ಸಿಂಗ್- ಬಾಕ್ಸಿಂಗ್
4. ರೊಮೇಶ್ ಪಥಾನಿಯಾ- ಹಾಕಿ
5. ಕೃಷನ್ ಕುಮಾರ್ ಹೂಡಾ- ಕಬಡ್ಡಿ
6. ವಿಜಯ್ ಬಾಲಚಂದ್ರ ಮುನೀಶ್ವರ್- ಪ್ಯಾರಾ ಪವರ್ ಲಿಫ್ಟಿಂಗ್
7. ನರೇಶ್ ಕುಮಾರ್- ಟೆನ್ನಿಸ್
8. ಓಂ ಪ್ರಕಾಶ್ ದಹಿಯಾ- ಕುಸ್ತಿ

LEAVE A REPLY

Please enter your comment!
Please enter your name here