ಪುಟ್ಟ ಹುಡುಗಿಯ ಕ್ಷಮೆಯಾಚಿಸಿದ ಜರ್ಮನ್ ಕಾರು ತಯಾರಕ ಕಂಪನಿ ‘ಆಡಿ’

0
96
Tap to know MORE!

ಆಡಿ ಸಂಸ್ಥೆಯು ತನ್ನ ನೂತನವಾದ ಜಾಹಿರಾತಿನಲ್ಲಿ, ಒಬ್ಬಳು ಸಣ್ಣ ಹುಡುಗಿಯನ್ನು ಕಾರಿನ ಮುಂಭಾಗದಲ್ಲಿ ವಾಲುತ್ತಿರುವಂತೆ ತೋರಿಸಿದ್ದರು. ಆದರೆ ಈಗ, ಆ ಜಾಹೀರಾತಿಗಾಗಿ ಜರ್ಮನಿಯ ಕಾರು ತಯಾರಕ ಕಂಪನಿ ಆಡಿ ಕ್ಷಮೆಯಾಚಿಸಿದೆ.

ಆಡಿ ಆರ್‌ಎಸ್ 4 ಅವಂತ್ ಅನ್ನು ಪ್ರಚಾರ ಮಾಡುವ ಜಾಹೀರಾತನ್ನು ಕಂಪನಿಯ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.

ಆದರೆ ಇದಕ್ಕೆ ಪರ ವಿರೋಧ ಚರ್ಚೆಗಳು ಪ್ರಾರಂಭವಾದವು. ಕೆಲವು ಸಾಮಾಜಿಕ ಮಾಧ್ಯಮದ ಬಳಕೆದಾರು ಈ ಜಾಹಿರಾತನ್ನು ಟೀಕಿಸಿದ್ದರು. ಇದನ್ನು “ಲೈಂಗಿಕವಾಗಿ ಸೂಚಿಸುವ”, “ವಿಚಿತ್ರ” ಮತ್ತು “ತೆವಳುವ” ಎಂದು ಬಣ್ಣಿಸಿದ್ದರು.

ಹಾಗಾಗಿ ಆಡಿ ಸಂಸ್ಥೆಯು ತನ್ನ ಜಾಹೀರಾತು “ತಪ್ಪು” ಎಂದು ಟ್ವೀಟ್ ಮಾಡಿ, “ನಾವು ಅಂದು ಕೊಂಡ ಸಂದೇಶ ತಪ್ಪಾಗಿ ತಲುಪಿದೆ” ಎಂದು ಹೇಳಿ, ಕ್ಷಮೆಯಾಚಿಸಿದೆ.

“ಈ ಚಿತ್ರಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಭವಿಷ್ಯದಲ್ಲಿ ಇದನ್ನು ಎಲ್ಲಿಯೂ ಬಳಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದಿದ್ದಾರೆ.

LEAVE A REPLY

Please enter your comment!
Please enter your name here