ರಾಮ ಮಂದಿರದ ‘ಭೂಮಿ ಪೂಜೆ’ಯ ಮುಂಚಿನ ಆಚರಣೆಗಳು, ಇಂದು ‘ಗೌರಿ ಗಣೇಶ’ ಪೂಜೆಯೊಂದಿಗೆ ಪ್ರಾರಂಭವಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನೆರವೇರಿಸಲಿರುವ ‘ಭೂಮಿ ಪೂಜನ’ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳುವ ಮೂರು ದಿನಗಳ ಆಚರಣೆಗಳು, ಗಣೇಶ ಪೂಜೆಯೊಂದಿಗೆ ಪ್ರಾರಂಭವಾಯಿತು.
11 ಪೂಜಾರಿಗಳು ಮಂತ್ರಗಳನ್ನು ಪಠಿಸುವುದರೊಂದಿಗೆ, ಬೆಳಿಗ್ಗೆ 8.00 ಕ್ಕೆ ಪೂಜೆ ಪ್ರಾರಂಭವಾದರೆ, ಇತರ ವಿವಿಧ ದೇವಾಲಯಗಳಲ್ಲಿ ‘ರಾಮಾಯಣ ಪಥ್’ ನಡೆಯಿತು.
“ಅಯೋಧ್ಯೆಯ ಪವಿತ್ರ ನಗರದಲ್ಲಿ ಇಂದು ಕೇಳುವ ಏಕೈಕ ಶಬ್ದವೆಂದರೆ ಮಂತ್ರಗಳು. ‘ಆರತಿಗಳು’ ಮತ್ತು ‘ರಾಮಾಯಣ ಪಥ್’ ಗಳು ಘಂಟಾಘೋಷದ ಮಧ್ಯೆ ಜಪಿಸಲಾಗುತ್ತಿದೆ. ಇದು ಮೂರು ದಿನಗಳ ಆರಂಭ. ಆಚರಣೆಯು ಬುಧವಾರ ‘ಭೂಮಿ ಪೂಜನ’ ದೊಂದಿಗೆ ಮುಕ್ತಾಯಗೊಳ್ಳುತ್ತದೆ ಮತ್ತು ಅದು ಮಂದಿರ ನಿರ್ಮಾಣದ ಆರಂಭವನ್ನು ಸೂಚಿಸುತ್ತದೆ ” ಎಂದು ಸ್ಥಳೀಯ ಪುರೋಹಿತ ಮಹಂತ್ ಸತ್ಯೇಂದ್ರ ಹೇಳಿದರು.
“ಇದಕ್ಕಿಂತ ಉತ್ತಮ ಶುಭ ಸಂದರ್ಭಗಳು ಇರಲು ಸಾಧ್ಯವಿಲ್ಲ. ಗಣೇಶನ ಆಶೀರ್ವಾದದಿಂದ ದೇವಾಲಯವು ಇನ್ನು ಮುಂದೆ, ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ” ಎಂದು ಸಂತ ಸಮಿತಿಯ ಮಹಾರಾಜ್ ಕನ್ಹಯ್ಯ ದಾಸ್ ಹೇಳಿದರು.