ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಮೂರು ವಿಶೇಷ ದಾಖಲೆಗಳನ್ನು ಬರೆದ ಮೋದಿ!

0
6595
Tap to know MORE!

ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 28 ವರ್ಷಗಳ ಬಳಿಕ, ಇಂದು ಅಯೋಧ್ಯೆಗೆ ಭೇಟಿ ನೀಡಿದರು. ಇದರೊಂದಿಗೆ ಅವರು ಇಂದು, ಒಂದೇ ದಿನದಲ್ಲಿ ಮೂರು ದಾಖಲೆಗಳನ್ನು ಮಾಡಿದ್ದಾರೆ.

  • ರಾಮ ಜನ್ಮಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿ
  • ಹನುಮಂತನ ಆಶೀರ್ವಾದ ಪಡೆಯಲು ಹನುಮಾನ್ ಗರ್ಹಿಗೆ ಭೇಟಿ ನೀಡಿದ ಮೊದಲ ಪ್ರಧಾನಿ.
  • ದೇಶದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಸಂಕೇತವಾಗಿರುವ ದೇವಾಲಯದ ‘ಭೂಮಿ ಪೂಜೆ’ (ಶಿಲಾನ್ಯಾಸ) ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಪ್ರಧಾನಿ

ಈ ಮೂರೂ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

ನರೇಂದ್ರ ಮೋದಿ 1992 ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು ಮತ್ತು ಮುರಳಿ ಮನೋಹರ್ ಜೋಶಿ ಅವರೊಂದಿಗೆ ಫೈಜಾಬಾದ್ (ಅಯೋಧ್ಯೆ) ನ ಜಿಐಸಿ ಮೈದಾನದಲ್ಲಿ ಒಂದು ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.

ಅದಲ್ಲದೆ, ಅಂದಿನ ಬಿಜೆಪಿ ಅಧ್ಯಕ್ಷ ಡಾ.ಮುರಳಿ ಮನೋಹರ್ ಜೋಶಿ ನೇತೃತ್ವದ ‘ತಿರಂಗಾ ಯಾತ್ರೆ’ಗೆ ಮೋದಿ ಅವರು ಪಾಲ್ಗೊಂಡಿದ್ದರು. ವಿಧಿ 370 ನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370 ಅನ್ನು ರದ್ದುಗೊಳಿಸಿ ಇಂದಿಗೆ ಒಂದು ವರ್ಷ ತುಂಬುತ್ತದೆ.

LEAVE A REPLY

Please enter your comment!
Please enter your name here