ಅಯೋಧ್ಯೆಯಲ್ಲಿ ಭೂಮಿ ಪೂಜೆ – ಅಮೇರಿಕಾದಲ್ಲೂ ಸಂಭ್ರಮಾಚರಣೆ

0
185

ವಾಷಿಂಗ್ಟನ್: ಭಾರತದಲ್ಲಿ ರಾಮ ಮಂದಿರದ ಶಿಲಾನ್ಯಾಸ ಸಮಾರಂಭದ ಸಂಭ್ರಮ ಮುಗಿಲು ಮುಟ್ಟಿದೆ. ಅದೇ ರೀತಿ ಭಾರತೀಯ-ಅಮೆರಿಕನ್ನರು ಈ ಆಚರಣೆಗಳು ಅಮೇರಿಕಾದಲ್ಲಿಯೂ ಪ್ರತಿಧ್ವನಿಸುವಂತೆ ಮಾಡುತ್ತಿದ್ದಾರೆ.

ಅಯೋಧ್ಯೆಯ ಪ್ರಸ್ತಾವಿತ ರಾಮ ಮಂದಿರದ ‘ಭೂಮಿ ಪೂಜೆ’ಯನ್ನು ಆಚರಿಸುತ್ತಾ, ವಾಷಿಂಗ್ಟನ್ ಡಿಸಿ ಮತ್ತು ಸುತ್ತಮುತ್ತಲಿನ ಭಾರತೀಯರು, ರಸ್ತೆಗಿಳಿದು ಸಂಭ್ರಮಿಸುತ್ತಿದ್ದಾರೆ. ಕೇಸರಿ ಧ್ವಜಗಳನ್ನು ಎತ್ತಿ “ಜೈ ಶ್ರೀ ರಾಮ್” ಎಂದು ಘೋಷಿಸುತ್ತಿದ್ದಾರೆ. ಮಕ್ಕಳು, ಹದಿಹರೆಯದವರು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಎಲ್ಲಾ ವರ್ಗದ ಜನರು ಕ್ಯಾಪಿಟಲ್ ಹಿಲ್ ಮತ್ತು ಶ್ವೇತಭವನದ ಸುತ್ತಲೂ ಜಮಾಯಿಸಿದ್ದಾರೆ.

ಅದೇ ರೀತಿ, ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಅಮೆರಿಕನ್ ಸಮುದಾಯವು, ಭಾರತದಲ್ಲಿನ ಆಚರಣೆಗಳಲ್ಲಿ ಸೇರಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಅಯೋಧ್ಯೆಯ ರಾಮ ಮಂದಿರದ ಭಗವಾನ್ ಶ್ರೀ ರಾಮನ 3ಡಿ ಭಾವಚಿತ್ರಗಳು, ಇಂದು ಬೆಳಿಗ್ಗೆ 10 ಗಂಟೆಗೆ (ಸ್ಥಳೀಯ ಸಮಯ) ಟೈಮ್ಸ್ ಸ್ಕ್ವೇರ್ ನಲ್ಲಿರುವ ದೈತ್ಯ ಜಾಹೀರಾತು ಫಲಕಗಳಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here