ಬಂಟ್ವಾಳ : ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್ – ಅಂದಾಜು ₹10 ಲಕ್ಷ ನಷ್ಟ

0
177
Tap to know MORE!

ಪಟ್ಟಣ ಪುರಸಭೆಯ ವ್ಯಾಪ್ತಿಯ ಪಾಣೆಮಂಗಳೂರಿನಲ್ಲಿ ನಡೆದ ಒಂದು ಘಟನೆಯಲ್ಲಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೇಕರಿಯೊಂದಕ್ಕೆ ಅಪಾರ ಹಾನಿ ಉಂಟಾಗಿದೆ.

ಪಾಣೇಮಂಗಳೂರಿನ ಕಲ್ಲುರ್ಟಿಗೆ ಮೀಸಲಾಗಿರುವ ದೇಗುಲವೊಂದರ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ “ವಿಷ್ಣು ಬೇಕರಿ” ಸಂಪೂರ್ಣವಾಗಿ ಸುಟ್ಟುಹೋಗಿದೆ. ಈ ಅಂಗಡಿಯು ರಾಜೇಶ್‌ ಎನ್ನುವವರಿಗೆ ಸೇರಿದೆ. ಇದರಿಂದಾಗಿ ಸುಮಾರು ₹10 ಲಕ್ಷ ದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ, ಅಂಗಡಿಯಲ್ಲಿ ನವೀಕರಣ ಕಾರ್ಯಗಳು ಆಗುತ್ತಿದ್ದವು. ಆಗಸ್ಟ್ 13 ರ ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.

ಬಂಟ್ವಾಳ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here