BIG NEWS : ಪತಿಯ ಆದಾಯ ಮತ್ತು ಸಂಬಳದ ಮೂಲ ತಿಳಿಯುವ ಹಕ್ಕು ಪತ್ನಿಗೆ ಇದೆ : ಮಾಹಿತಿ ಆಯೋಗದಿಂದ ಮಹತ್ವದ ಆದೇಶ

0
57

ನವದೆಹಲಿ: ಕೇಂದ್ರ ಮಾಹಿತಿ ಆಯೋಗ, ಪತ್ನಿಗೆ ಪತಿಯ ಸಂಬಳ ಮತ್ತು ಆದಾಯದ ಮೂಲ ತಿಳಿಯುವ ಹಕ್ಕಿದೆ ಎಂದು ಆದೇಶ ಹೊರಡಿಸಿದೆ. ಪತ್ನಿಗೆ ಪತಿ ಹಣಕಾಸಿನ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಪತ್ನಿ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜಸ್ಥಾನದ ಜೋಧ್‌ಪುರದ ರಹ್ಮತ್ ಬಾನೋ ಎಂಬ ಮಹಿಳೆ ತಮ್ಮ ಪತಿ ರಾಜೇಶ್ ಹೈದರ್ ಅವರ ಆದಾಯದ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ಮೇಲೆ ರಹ್ಮತ್ ಬಾನೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಆಯೋಗದ ಕದ ತಟ್ಟಿದ್ದಾರೆ.

ಇದನ್ನೂ ಓದಿ: ತಮ್ಮ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿ, ಅಣಕಿಸಿದ ಬರಾಕ್ ಒಬಾಮ!

ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗ ತೆರಿಗೆ ಇಲಾಖೆ ಅರ್ಜಿಯನ್ನು ತಿರಸ್ಕಾರ ಮಾಡಿರುವ ಬಗ್ಗೆ ಅಸಮಾಧಾನ ಹೊರ ಹಾಕಿತ್ತು. ಜೊತೆಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದೆ. ಅಲ್ಲದೆ ಮಹಿಳೆ ಕೇಳಿರುವ ಮಾಹಿತಿ ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ ಅಡಿಯಲ್ಲಿ ಬರುತ್ತದೆ. ಆದ್ದರಿಂದ ಪತಿಯ ಆದಾಯ ಮತ್ತು ಸಂಬಳದ ಮಾಹಿತಿ ಪಡೆಯಲು ಪತ್ನಿಗೆ ಹಕ್ಕಿದೆ ಎಂದು ಕೇಂದ್ರ ಮಾಹಿತಿ ಆಯೋಗ ಆದೇಶ ಹೊರಡಿಸಿದೆ. ಅಲ್ಲದೆ ಈ ಆದೇಶ ಸರ್ಕಾರಿ ನೌಕರರಿಗೂ ಅನ್ವಯವಾಗಲಿದೆ.

LEAVE A REPLY

Please enter your comment!
Please enter your name here