Home Blog
‍ಮೂಡುಬಿದಿರೆ: ಏಕಕಾಲಕ್ಕೆ ಮೂರು ವಿಶ್ವ ದಾಖಲೆಗಳನ್ನು ಮಾಡುವ ಮೂಲಕ ಸದ್ದು ಮಾಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಬಿವಿಎ ವಿದ್ಯಾರ್ಥಿಯಾಗಿದ್ದ, ಯುವ ಕಲಾವಿದ ತಿಲಕ್ ಕುಲಾಲ್ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ವಿಭಿನ್ನವಾದ ಕಲಾಕೃತಿಯನ್ನು ರಚಿಸಿದ್ದಾರೆ. 2 ಗಂಟೆ 30 ನಿಮಿಷ ಸಮಯದಲ್ಲಿ (ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ) 70 ಕೆ.ಜಿ ಅಕ್ಕಿ ಮತ್ತು 40 ಕೆ.ಜಿ ಇದ್ದಿಲನ್ನು ಬಳಸಿಕೊಂಡು 20 ಅಡಿ ಉದ್ದ ಮತ್ತು 20 ಅಡಿ ಅಗಲವಾದ ಆದಿ ಯೋಗಿಯ ಕಲಾಕೃತಿಯನ್ನು ಮೂಡುಬಿದಿರೆಯ, ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುತ್ತಿಗೆ ದೇವಾಲಯದ...
ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟ ತೀರಿಹೋದಾಗ ಒಂದಿಷ್ಟು ಆಕ್ರೋಶದ ದಂಗೆಗಳು, ಮನಸ್ಥಿತಿಯ ಕದನಗಳು , ಹುಚ್ಚು ಅಭಿಮಾನಿಗಳ ಹುಚ್ಚಾಟಗಳು , ಮೌಢ್ಯದ ಆಚರಣೆಗಳು ಹೀಗೆ ಅದೊಂದು ಅಹಿತಕರ ವಾತಾವರಣ ನಾವು ನೋಡೆ ಇರುತ್ತೆವೆ. ಆದರೆ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರವನ್ನು ನೋಡಲು ಸುಮಾರು ಇಪ್ಪತ್ತೈದು ಲಕ್ಷ ಜನ ಬಂದಿದ್ದರು ಕೂಡ ಇದೇ ಮೊದಲ ಬಾರಿಗೆ ಎಲ್ಲೂ ಯಾರಿಗೂ ತೊಂದರೆಯಾಗದೆ ದೇವರ ದರ್ಶನಕ್ಕೆ ಬಂದ ಹಾಗೆ ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು ಅಲ್ಲದೆ ಎಷ್ಟೋ ಸಾವಿರಾರು ಸಾವಿರಾರು ಜನರ ರಕ್ತದಾನ...
ಬಾಲ್ಯದ ದಿನಗಳು ಕಳೆದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಪ್ರಸ್ತುತ ಬಿ.ಎಡ್ ವಿಧ್ಯಾಭ್ಯಾಸವನ್ನು ಮುಗಿಸುವ ಹಂತದಲ್ಲಿ ಬಂದು ಮುಟ್ಟಿದ್ದೇನೆ. ಈ ಸಂದರ್ಭದಲ್ಲಿ ನನಗೆ ನನ್ನ ತಾಯಿ ನಾಡು, ನುಡಿ, ಭಾಷೆ ಬಗ್ಗೆ ಜ್ಞಾನವನ್ನು ಮನೆಯಲ್ಲಿ ಪಡೆದು ಮನೆಯೇ ಮೊದಲ ಪಾಠ ಶಾಲೆ ಎಂಬ ಧ್ಯೇಯ ವಾಕ್ಯ ಓದಲು ತುಂಬಾ ಸಂತೋಷವಾಗುತ್ತದೆ. ಕಾರಣ ಇಷ್ಟೇ, ನನ್ನ ಈ ವಯಸ್ಸಿನಲ್ಲಿ ನನ್ನ ಮಾತೃಭಾಷೆ  ಜೊತೆಗೆ  ಸ್ಥಳೀಯ ಭಾಷೆಗಳು ಹಾಗೂ ಇಂಗ್ಲೀಷ್ ಭಾಷೆಯ ಜ್ಞಾನವನ್ನು ಹೊಂದಿರುತ್ತೇನೆ.  ಈಗ  ತಿಳಿಯ ಪಡಿಸುವ ವಿಷಯ, ನಾವು ದಕ್ಷಿಣ ಕನ್ನಡದವರು. ಹಿರಿಯರ ಕಾಲದಿಂದಲೂ ಇಲ್ಲಿಯ ಜನರು...
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ  ನ.16 ಹಾಗೂ 17 ರಂದು ನಡೆಯಬೇಕಾಗಿದ್ದ ಉದ್ಯೋಗ ಮೇಳವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದೆಂದು ಹೇಳಲಾಗಿದೆ.
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬಿಸಿನೆಸ್ ಮ್ಯಾನ್ ಒಬ್ಬರಿಂದ 1.51 ಕೋಟಿ ಹಣವನ್ನು ಪಡೆದು ವಂಚನೆ ನಡೆಸಿದ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿತಿನ್ ಬರಾರಿ ಎಂಬ ಬಿಸಿನೆಸ್ ಮ್ಯಾನ್ ಶನಿವಾರ ಬಾಂದ್ರಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. 2014ರಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿದ ಎಸ್ಎಫ್ಎಲ್ ಫಿಟ್ನೆಸ್ ಕಂಪನಿಗೆ ಹಣ ಹೂಡಿಕೆ ಮಾಡುವಂತೆ ಅದರ ಡೈರೆಕ್ಟರ್ ಖಾಶಿಫ್ ಖಾನ್, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ...
ಟಿ20 ವಿಶ್ವಕಪ್ ಬಳಿಕ ಭಾರತ ಕ್ರಿಕೆಟ್ ತಂಡದ ಟಿ20 ನಾಯಕ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಘೋಷಿಸಿದ್ದಾರೆ. ಈ ಕುರಿತಂತೆ ಸುದೀರ್ಘ ಪತ್ರವೊಂದನ್ನು ಬರೆದಿರುವಂತ ಅವರು, ಭಾರತವನ್ನು ಪ್ರತಿನಿಧಿಸುವುದಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ತಂಡವನ್ನು ನನ್ನ ಅತ್ಯಂತ ಸಾಮರ್ಥ್ಯಕ್ಕೆ ಮುನ್ನಡೆಸುವ ಅದೃಷ್ಟ ನನ್ನದಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ನನ್ನ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. RCBಗೆ ಆನೆಬಲ | ತಂಡಕ್ಕೆ ವಿಶ್ವ ನಂ.2 ಬೌಲರ್, ಶ್ರೀಲಂಕಾದ ಸ್ಪಿನ್ನರ್ ವಿ.ಹಸರಂಗ ಸೇರ್ಪಡೆ ಅವರಿಲ್ಲದೆ ನಾನು ಅದನ್ನು...
ಮಂಗಳೂರು : ಮೊದಲ ಬಾರಿಗೆ ಮಂಗಳೂರಿನವರೋರ್ವರು ರಾಷ್ಟ್ರ ಮಟ್ಟದ ಸಿಎ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ರೂತ್ ಕ್ಲಾರಾ ಡಿಸಿಲ್ವಾ ಕಳೆದ ಜುಲೈನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಒಂದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಸ್ಟಿಟ್ಯೂಟ್ ವತಿಯಿಂದ 2021ರ ಸಾಲಿನ ಸಿಎ ಅಂತಿಮ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರ ಫಲಿತಾಂಶ ಸೆ.13ರಂದು ಬಂದಿದ್ದು, ಮಂಗಳೂರು ಮೂಲದ ರೂತ್ ಕ್ಲಾರಾ ಡಿಸಿಲ್ವಾ ಆಲ್ ಇಂಡಿಯಾ ಲೆವಲಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ನಗರದ ಮಲ್ಲಿಕಟ್ಟೆಯ ನಿವಾಸಿಗಳಾಗಿರುವ ರೋಸಿ ಮಾರಿಯಾ ಡಿಸಿಲ್ವಾ ಮತ್ತು...
ಹೊಸದಿಲ್ಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಶನಿವಾರ ನಿಧನರಾದರು. ರಾಜಸ್ಥಾನ ಮಾಜಿ ರಾಜ್ಯಪಾಲರಾಗಿದ್ದ ಸಿಂಗ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಬಿಜೆಪಿ ನಾಯಕ ಜುಲೈ 4 ರಿಂದ ರಾಷ್ಟ್ರ ರಾಜಧಾನಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐಎಂಎಸ್) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮುನ್ನ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇ 2ಕ್ಕಿಂತ ಹೆಚ್ಚಿರುವ ಕಾರಣ ಶಾಲಾ ಆರಂಭವನ್ನು ಆಗಸ್ಟ್ 28ರ ನತಕ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಮಲ್ಲೇಸ್ವಾಮಿ ತಿಳಿಸಿದ್ದಾರೆ. ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು "ಸುದ್ದಿವಾಣಿ" ವಾಟ್ಸಾಪ್ ಗುಂಪಿಗೆ ಸೇರಿ - ಸುದ್ದಿವಾಣಿ ಓದುಗರ ಬಳಗ ಕೋವಿಡ್ ಪಾಸಿಟಿವಿಟಿ ದರವು ಶೇ 2ಕ್ಕಿಂತ ಕಡಿಮೆಯಾದರೆ, 9 ಮತ್ತು 10ನೇ ಭೌತಿಕ ತರಗತಿಯನ್ನು ಆ.23ರಂದು ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರವು ಇನ್ನೂ ಶೇ 2ಕ್ಕಿಂತ...
ಗುವಾಹಾಟಿ: ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಅಸ್ಸಾಂನ 14 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಐಟಿ ಕಾಯ್ದೆ ಮತ್ತು ಸಿಆರ್‍ಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಸಾಮಾಜಿಕ ಜಾಲತಾಣ ಗಳಲ್ಲಿ ಎಚ್ಚರ ವಹಿಸುತ್ತಿದ್ದೇವೆ ಮತ್ತು ವಿವಾದಿತ ಪೋಸ್ಟ್‍ಗಳ ಮೇಲೆ ನಿಗಾ ವಹಿಸಿದ್ದೇವೆ ಎಂದು ಅಧಿಕಾರಿ ಹೇಳಿದರು. ಕಮರೂಪ್ ಮೆಟ್ರೋಪಾಲಿಟನ, ಬಾರ್ಪೇಟಾ, ಧುಬ್ರಿ ಮತ್ತು ಕರಿಮಗಂಜ್ ಜಿಲ್ಲಾಗಳಲ್ಲಿ...
- Advertisement -

MOST POPULAR

HOT NEWS