#Boycott_KGF_Chapter_2 – ಏನಿದು ಹೊಸ ಟ್ರೆಂಡ್!?

0
377
Tap to know MORE!

ಇಡೀ ಭಾರತೀಯ ಸಿನಿಮಾಭಿಮಾನಿಗಳನ್ನು ಕನ್ನಡ ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿದ ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್ – ಚಾಪ್ಟರ್ 1. ಇದೀಗ ಅದರ ಮುಂದಿನ ಭಾಗವಾದ ಚಾಪ್ಟರ್ 2 ಶೂಟಿಂಗ್ ಹಂತದಲ್ಲಿದೆ. ಕೊರೋನಾ ಸಾಂಕ್ರಾಮಿಕದ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ, ಇದೀಗ ಪುನರಾರಂಭವಾಗಿದೆ. ಚಿತ್ರ ತಂಡವು ಬಿಡುಗಡೆ ಮಾಡುತ್ತಿರುವ ಒಂದೊಂದು ಛಾಯಾಚಿತ್ರಗಳೂ ಸಹ ಅಭಿಮಾನಿಗಳಲ್ಲಿ ಕೌತುಕವನ್ನು ಹೆಚ್ಚಿಸುತ್ತಿದೆ.

ಆದರೆ, ಇತ್ತೀಚೆಗೆ ಸಿನಿಮಾ ಕುರಿತಂತೆ ವಿರೋಧಿ ಕೂಗುಗಳು ಕೇಳಿ ಬರುತ್ತಿದೆ. #boycott_kgf_chapter_2 ಭಾರಿ ಸದ್ದು ಮಾಡುತ್ತಿದೆ. ಪ್ರತಿಯೊಬ್ಬರಿಂದಲೂ ಮೆಚ್ಚುಗೆ ಪಡೆದ ಸಿನಿಮಾಗೆ ಯಾಕೆ ವಿರೋಧ ಅಂದ್ರೆ ಖಂಡಿತಾ ಶಾಕ್ ಆಗ್ತೀರಾ!

ಕೆಜಿಎಫ್ ಚಾಪ್ಟರ್ 2 – ಅಧೀರನಾಗಿ ಸಂಜಯ್ ದತ್

ಆ. 26 ರಂದು ನಿರ್ದೇಶಕ ಪ್ರಶಾಂತ್ ನೀಲ್ ಶೂಟಿಂಗ್ ಸೆಟ್‌ನಿಂದ ಒಂದೆರಡು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಆ ಒಂದು ಫೋಟೋ ಈ ಎಲ್ಲಾ ವಿರೋಧಕ್ಕೆ ಕಾರಣ!

ಚಾಪ್ಟರ್ 2 ಸಿನಿಮಾದಲ್ಲಿ ಸಂಜಯ್ ದತ್ ಇರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಚಿತ್ರಕ್ಕೆ ಮತ್ತೊಂದು ಬಿಗ್ ಎಂಟ್ರಿ ಕೊಟ್ಟಿರೋದು ಪ್ರಕಾಶ್ ರಾಜ್. ಇವರೇ ಸಿನಿಮಾಭಿಮಾನಿಗಳ ವಿರೋಧಕ್ಕೆ ಕಾರಣ.

ಇತ್ತೀಚೆಗೆ, ಪ್ರಮುಖವಾಗಿ ಬೆಂಗಳೂರು ಗಲಭೆಯ ನಂತರ ಧರ್ಮ, ನಿಂದನೆ, ಟೀಕೆ ಬಗ್ಗೆ ಬಹಳಷ್ಟು ಚರ್ಚೆಗಳು ಪ್ರಾರಂಭವಾಗಿದೆ. ಪ್ರಕಾಶ್ ರಾಜ್ ಹಿಂದೂ ವಿರೋಧಿ, ಎಡಪಂಥೀಯ ಸಂಘಟನೆಗಳೊಂದಿಗೆ ಇರುತ್ತಾರೆ ಎಂಬ ಕಾರಣಕ್ಕೆ ಕೆಜಿಎಫ್ ಚಿತ್ರವನ್ನೇ ನೋಡಬಾರದು ಎಂದು ಟ್ರೆಂಡ್ ಸೃಷ್ಟಿಯಾಗಿದೆ.

ಮತ್ತೊಂದೆಡೆ, ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತೆ ಮತ್ತು ಟಿವಿಗಳಲ್ಲಿ ಮುಸ್ಲಿಂ ವಿರೋಧಿ ಚರ್ಚೆಗಳಲ್ಲಿ ಅವರು ಪಾಲ್ಗೊಳ್ಳುತ್ತಿರುವುದರಿಂದಲೂ ಚಿತ್ರವನ್ನು ನೋಡಬಾರದು ಎಂಬ ಕೂಗು ಕೇಳಿ ಬರುತ್ತಿದೆ. ಇದೆಲ್ಲವೂ ಎಲ್ಲಿ ಹೋಗಿ ತಲುಪಲಿದೆ ಎಂದು ಕಾದು ನೋಡಬೇಕು!

LEAVE A REPLY

Please enter your comment!
Please enter your name here