#BoycottTanishq ಟ್ರೆಂಡಿಂಗ್ – ವಿವಾದಿತ ಜಾಹಿರಾತನ್ನು ಕೆಳಗಿಳಿಸಿದ ತನಿಷ್ಕ್!

0
183
Tap to know MORE!

ಹಿಂದೂ-ಮುಸ್ಲಿಂ ದಂಪತಿಗಳ ಮೇಲೆ ತಯಾರಿಸಿದ ಹೊಸ ಜಾಹಿರಾತಿಗೆ ಎದುರಾದ ಭಾರೀ ವಿವಾದದ ಬಳಿಕ, ಜ್ಯುವೆಲ್ಲರಿ ಬ್ರಾಂಡ್ ತನಿಷ್ಕ್ ಅದನ್ನು ಕೆಳಗಿಳಿಸಿದೆ.

ಜಾಹೀರಾತಿನಲ್ಲಿ ‘ಲವ್ ಜಿಹಾದ್’ ಅನ್ನು ಉತ್ತೇಜಿಸಲಾಗಿದೆ ಎಂದು ನೆಟ್ಟಿಗರು ಆರೋಪಿಸಿದರು. ಒಂದು ನಿರ್ದಿಷ್ಟ ಸಮುದಾಯದ ಜನರು ಈ ಜಾಹೀರಾತನ್ನು ವಿರೋಧಿಸಿದರು. ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್ ಒಂದು ಪಿತೂರಿ ಸಿದ್ಧಾಂತ ಎಂದು ನಂಬಲಾಗಿದ್ದು, ಮುಸ್ಲಿಂ ಪುರುಷರು ಮುಸ್ಲಿಮೇತರ ಸಮುದಾಯಗಳಿಗೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಸ್ಲಾಂಗೆ ಮತಾಂತರಗೊಳಿಸುವ ಸಲುವಾಗಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.

ಈ ಜಾಹಿರಾತು, ತನಿಷ್ಕ್ ಅವರ ಪ್ರಸ್ತುತ ಹಬ್ಬದ ಋತುವಿನ ಸಂಗ್ರಹವಾದ ‘ಏಕತ್ವಮ್’ ನ ಒಂದು ಭಾಗವಾಗಿದೆ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಈ ಜಾಹಿರಾತು ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಟ್ವಿಟ್ಟರ್‌ನಲ್ಲಿ ಭಾರೀ ವೈರಲ್ ಆಗಿತ್ತು. ಸೋಮವಾರ ಬೆಳಿಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ, #BoycottTanishq ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು.

ಜ್ಯುವೆಲ್ಲರಿ ಬ್ರಾಂಡ್‌ನ ಜಾಹೀರಾತಿನಲ್ಲಿ, ಮುಸ್ಲಿಂ ಕುಟುಂಬದಲ್ಲಿ ಮದುವೆಯಾದ ಹಿಂದೂ ಮಹಿಳೆಯೊಬ್ಬಳು ತನ್ನ ಬೇಬಿ ಶವರ್‌ಗೆ ಸಿದ್ಧಳಾಗಿದ್ದಾಳೆ. ಅವಳ ಇಚ್ಛೆಯಂತೆ, ಹಿಂದೂ ಆಚರಣೆಗಳನ್ನು ಮಾಡುವ ಮೂಲಕ, ತಮ್ಮ ಹಿಂದೂ ಸೊಸೆಗೆ ಹಿತಕರವಾಗಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆಂದು ತೋರಿಸಲಾಗಿದೆ.

LEAVE A REPLY

Please enter your comment!
Please enter your name here