BREAKING| ದೇಶಾದ್ಯಂತ ಎಲ್ಲರಿಗೂ ಕೊರೋನಾ ಲಸಿಕೆ ಉಚಿತ: ಕೇಂದ್ರ ಸರ್ಕಾರ ಘೋಷಣೆ

0
112
Tap to know MORE!

ನವದೆಹಲಿ ಜ.2: ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಹೇಳಿದ್ದಾರೆ.

ಇಂದು ದೇಶಾದ್ಯಂತ ಕೋವಿಡ್​ ಲಸಿಕೆಯ ಡ್ರೈ ರನ್ ನಡೆಸಲಾಗುತ್ತಿದ್ದು, ದೆಹಲಿಯ ಆರೋಗ್ಯ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದೆ. ಲಸಿಕೆಯ ಸುರಕ್ಷತೆಯ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ. ಎಲ್ಲವನ್ನೂ ವಿವರವಾಗಿ ಪರಿಶೀಲಿಸಲಾಗಿದೆ. ಪೋಲಿಯೊ ಲಸಿಕೆ ನೀಡಲು ಆರಂಭಿಸಿದ ಸಂದರ್ಭದಲ್ಲೂ ವದಂತಿಗಳು ತೇಲಿ ಬಂದಿದ್ದವು. ಆದರೆ ಜನರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ ಪರಿಣಾಮ ಈಗ ಭಾರತ ಪೋಲಿಯೊ ಮುಕ್ತವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಭಾರತದಲ್ಲಿ ಆಕ್ಸ್ಫರ್ಡ್ ಕೋವಿಡ್ ಲಸಿಕೆ ಬಳಸಲು ಅನುಮತಿ..!

ದೇಶದಲ್ಲಿ ಎರಡನೇ ಬಾರಿಗೆ ಇಂದು ಕೋವಿಡ್​ ಲಸಿಕೆ ಡ್ರೈ ರನ್​​ ನಡೆಸಲಾಗುತ್ತಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

“ಕೋವ್ಯಾಕ್ಸಿನ್” ಪಡೆದ ಸಚಿವರಿಗೆ ಕೊರೋನಾ – ಏನಂತಾರೆ ಲಸಿಕೆ ತಯಾರಕರು?

LEAVE A REPLY

Please enter your comment!
Please enter your name here