BREAKING| ಜ.16 ರಿಂದ ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಪ್ರಾರಂಭ!

0
87
Tap to know MORE!

ನವದೆಹಲಿ ಜ.9: ಬಹು ದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರ ಸರ್ಕಾರ ದೇಶದಾದ್ಯಂತ ಲಸಿಕೆ ವಿತರಣೆಗೆ ದಿನಾಂಕ ನಿಗದಿ ಮಾಡಿದ್ದು, ಜನವರಿ 16 ರಿಂದ ಇದಕ್ಕೆ ಚಾಲನೆ ಸಿಗಲಿದೆ.

ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಪೂರ್ವಭಾವಿ ತಯಾರಿಗಾಗಿ ಡ್ರೈ ರನ್‌ ನಡೆಸಲಾಗಿದ್ದು, ಇದೀಗ ಲಸಿಕೆ ನೀಡಿಕೆಗೆ ಅಧಿಕೃತವಾಗಿ ಜನವರಿ 16 ರಂದು ಚಾಲನೆ ಸಿಗಲಿದೆ.

ಇದನ್ನೂ ಓದಿ: ದೇಶಾದ್ಯಂತ ಎಲ್ಲರಿಗೂ ಕೊರೋನಾ ಲಸಿಕೆ ಉಚಿತ: ಕೇಂದ್ರ ಸರ್ಕಾರ ಘೋಷಣೆ

ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ ಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಅವರುಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲೇ ಅವರುಗಳ ಮೊಬೈಲ್‌ ಗೆ ಲಸಿಕೆ ನೀಡುವ ಕುರಿತು ಸಂದೇಶ ರವಾನೆಯಾಗಲಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಎಂಬ ಎರಡು ಲಸಿಕೆಗಳಿಗೆ ಭಾರತ ಸರ್ಕಾರ ಅನುಮತಿ ನೀಡಿದ್ದು, ಈ ಎರಡೂ ಕೂಡಾ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿರುವುದು ವಿಶೇಷ.

“ಕೋವ್ಯಾಕ್ಸಿನ್” ಪಡೆದ ಸಚಿವರಿಗೆ ಕೊರೋನಾ – ಏನಂತಾರೆ ಲಸಿಕೆ ತಯಾರಕರು?

LEAVE A REPLY

Please enter your comment!
Please enter your name here