BREAKING| ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ

0
139
Tap to know MORE!

ಮೇ.24 ರಿಂದ ಜೂನ್ 16 ರ ವರೆಗೆ ಬೋರ್ಡ್ ಪರೀಕ್ಷೆ!

ಬೆಂಗಳೂರು : ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಕೂಡ ಬಿಡುಗಡೆಗೊಂಡಿದೆ. ಮೇ.24ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಿಗದಿ ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ದ್ವಿತೀಯ ಪಿಯುಸಿ ಅಂತಿಮ ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಿದಂತ ಅವರು, ಈಗಾಗಲೇ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಂದಂತ ಮಾಹಿತಿಯನ್ನು ಆಧರಿಸಿ, ಇದೀಗ ಮೇ 24ರಿಂದ ಜೂನ್ 16ರವರೆಗೆ ನಡೆಸಲು ಉದ್ದೇಶಿಸಿರುವಂತ ಅಂತಿಮ ವೇಳಾಪಟ್ಟಿಯನ್ನು ಪ್ರಕಕಟಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೂಲಕ ಇದುವರೆಗೆ 1,000 ಕೋಟಿ ಸಂಗ್ರಹ!

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ

ಮೇ.24, ಇತಿಹಾಸ
ಮೇ.26, ಭೂಗೋಳ ಶಾಸ್ತ್ರ
ಮೇ.31, ಇಂಗ್ಲೀಷ್
ಜೂನ್.2, ರಾಜ್ಯಶಾಸ್ತ್ರ
ಜೂನ್.3, ಜೀವಶಾಸ್ತ್ರ
ಜೂನ್.4, ಅರ್ಥಶಾಸ್ತ್ರ
ಜೂನ್.7, ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂನ್.10, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ
ಜೂನ್.12, ಸಂಖ್ಯಾಶಾಸ್ತ್ರ
ಜೂನ್.14, ಲೆಕ್ಕಶಾಸ್ತ್ರ, ಗಣಿತ ಪರೀಕ್ಷೆ
ಜೂನ್.16, ಕನ್ನಡ (ಪ್ರಥಮ ಭಾಷೆ)

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here