BREAKING | ಮೂಡುಬಿದಿರೆ : ಈಜಲು ಹೋದ ನಾಲ್ವರು ನೀರುಪಾಲು | ಸ್ಮಶಾನವಾದ ಮದುವೆ ಮನೆ!

0
190
Tap to know MORE!

ಮೂಡುಬಿದಿರೆ ನ .24 :ಮೂಡಬಿದಿರೆಯ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆಯ ಶಾಂಭವಿ ನದಿಗೆ ಈಜಾಡಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಕಡಂದಲೆಯ ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದ ಸಂದರ್ಭ ಈ ದುರಂತ ಸಂಭವಿಸಿದೆ. ಕಡಂದಲೆ ಶ್ರೀಧರ ಆಚಾರ್ಯ ಎಂಬವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದ ಇವರು ಈಜಲೆಂದು ನದಿಗೆ ಇಳಿದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಿನ್ನಿಗೋಳಿ : ಈಜಲು ಹೋದ ಬೆಂಗಳೂರಿನ ಯುವಕ ನೀರುಪಾಲು – ಇಬ್ಬರ ರಕ್ಷಣೆ

ವಾಮಂಜೂರಿನ ಮೂಡುಶೆಡ್ಡೆಯ ನಿಖಲ್(18), ಅರ್ಶಿತಾ(20), ವೇಣೂರಿನ ಸುಭಾಸ್(19), ಪೆರಾರದ ರವಿ(30) ಮೃತರೆಂದು ಸ್ಥಳಿಯರು ತಿಳಿಸಿದ್ದಾರೆ. ನದಿಯ ಆಳವಿರುವ ಪ್ರದೇಶದಲ್ಲಿ ಈಜಲು ಹೋಗಿದ್ದು , ಒಬ್ಬರು ನೀರಿನ ಸೆಳವಿಗೆ ಮುಳುಗಿದ್ದು ಅವರನ್ನು ರಕ್ಷಿಸಲು ಉಳಿದವರು ಪ್ರಯತ್ನಿಸಿ ಉಳಿದವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here