ಇಂದು ಒಂದೇ ದಿನ ಇಬ್ಬರು ಕೇಂದ್ರ ಸಚಿವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿಗೆ ಒಳಪಟ್ಟ ಕೇಂದ್ರ ಸಚಿವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ. ಮೊದಲು ಗೃಹ ಸಚಿವ ಅಮಿತ್ ಶಾ, ಬಳಿಕ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ಕೊರೋನಾ ಸೋಂಕಿಗೆ ಒಳಗಾಗಿದ್ದರು.
ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ಸೋಂಕು ಇಂದು ದೃಢಪಟ್ಟಿದೆ. ಅವರನ್ನು ಈಗಾಗಲೇ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಗಿದೆ.
ಅರ್ಜುನ್ ಮೇಘವಾಲ್ ಕೇಂದ್ರ ಜಲಸಂಪನ್ಮೂಲ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿದ್ದಾರೆ.
कोरोना के शुरूआती लक्षण आने पर मैंने टेस्ट करवाया व पहली जाँच नेगेटिव आने के बाद आज दूसरी जाँच पॉजिटिव आई है।
मेरी तबीयत ठीक है परन्तु चिकित्सकीय सलाह पर AIIMS में भर्ती हूँ। मेरा निवेदन है कि जो लोग गत कुछ दिनों में मेरे संपर्क में आयें हैं, कृपया अपने स्वास्थ्य का ध्यान रखे ।— Arjun Ram Meghwal (@arjunrammeghwal) August 8, 2020
ಇದರ ಜತೆಯಲ್ಲೇ ಕೇಂದ್ರ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರೂ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಜೋಧಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
सांस लेने में थोड़ी तकलीफ के साथ बुखार है। मैं अस्पताल में चिकित्सकों की देखरेख में स्वास्थ्य लाभ ले रहा हूँ। आप सभी से निवेदन है कि परेशान न हो। अत्यंत आवश्यक कार्य होने पर आप फोन कर सकते हैं।
— Kailash Choudhary (@KailashBaytu) August 8, 2020