ಸಿಎಂ ಯಡಿಯೂರಪ್ಪ ಗುಣಮುಖರಾಗುವಂತೆ ಶುಭ ಹಾರೈಸಿದ ರಾಜಕೀಯ ವೈರಿಗಳು!

0
220
Tap to know MORE!

ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್ ತಗುಲಿರುವುದು ನಿನ್ನೆ ದೃಢಪಟ್ಟಿದೆ. ಇದರ ಬಗ್ಗೆ ಸ್ವತಃ ಮುಖ್ಯಮಂತ್ರಿಯವರೇ ‘ನನಗೆ ರೋಗಲಕ್ಷಣಗಳು ಇಲ್ಲ, ಆದರೂ ಕೊವಿಡ್ ಪಾಸಿಟಿವ್ ಬಂದಿದೆ’ ಎಂದು ಟ್ವೀಟ್ ಮಾಡಿದ್ದರು.

77 ವರ್ಷದ ಯಡಿಯೂರಪ್ಪ ಅವರು ಸೋಂಕಿನ ಭೀತಿಯ ನಡುವೆಯೂ ಅನೇಕ ಸಭೆಗಳಲ್ಲಿ ಭಾವಗಹಿಸಿ, ಕೊವಿಡ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇದರ ಪ್ರತಿಫಲವೇ ಸುಮಾರು 4 ತಿಂಗಳ ಕಾಲ ರಾಜಧಾನಿ ಸೇರಿದಂತೆ ಕರ್ನಾಟಕ ರಾಜ್ಯವೇ ರಾಷ್ಟ್ರಕ್ಕೇ ಮಾದರಿಯಾಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.

ಆದರೆ, ಈಗ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿರುವುದು ರಾಜಕೀಯ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ರಾಜಕೀಯವನ್ನೆಲ್ಲ ಪಕ್ಕಕ್ಕಿಟ್ಟು ಸಿಎಂ ಆದಷ್ಟೂ ಬೇಗ ಚೇತರಿಸಿಕೊಳ್ಳಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎಂದು ಪ್ರಾರ್ಥಿಸಿದ್ದಾರೆ.

ಶೀಘ್ರ ಕೊರೋನಾ ಭಾದೆಯಿಂದ ಮುಕ್ತರಾಗಿ, ಆಡಳಿತಾತ್ಮಕ ಕಾರ್ಯದಲ್ಲಿ ಅವರು ತೊಡಗಿಕೊಳ್ಳಲಿ : ಸಿದ್ದರಾಮಯ್ಯ

ಬಿಎಸ್‌ವೈ ಗೆ ಸೋಂಕು ಮೆಟ್ಟಿ ನಿಲ್ಲುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ : ಕುಮಾರಸ್ವಾಮಿ

ಯಡಿಯೂರಪ್ಪನವರು ಗುಣಮುಖರಾಗಿ, ಜನರ ಕಷ್ಟಕ್ಕೆ ಸ್ಪಂದಿಸುವಂತಾಗಲಿ : ದೇವೇಗೌಡರು

ಮುಖ್ಯಮಂತ್ರಿಗಳು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ : ಈಶ್ವರ ಖಂಡ್ರೆ

ಯಡಿಯೂರಪ್ಪನವರು ಶೀಘ್ರ ಆರೋಗ್ಯವಂತರಾಗಲಿ : ರಿಝ್ವಾನ್ ಅರ್ಷದ್

LEAVE A REPLY

Please enter your comment!
Please enter your name here