ಪಕ್ಷದ ಚುನಾವಣೆಗೆ ಸರಿಯಾದ ಕಾರ್ಯವಿಧಾನ ತರುವವರೆಗೂ ಮಧ್ಯಂತರ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಕೆ

1
115
Tap to know MORE!

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ, ಕಳೆದ ವರ್ಷ ಆಗಸ್ಟ್ 10 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಸೋನಿಯಾ ಗಾಂಧಿಯವರನ್ನು ಪಕ್ಷದ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ ಕಾಂಗ್ರೆಸ್ ಪಕ್ಷವು ಇದುವರೆಗೆ, ಒಬ್ಬ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ.

ನಿನ್ನೆ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಗ್ವಿ, “ಸೋನಿಯಾ ಗಾಂಧಿ ಅವರ ಅಧಿಕಾರಾವಧಿಯು ಸೋಮವಾರ (ಆಗಸ್ಟ್ 10) ಮುಕ್ತಾಯಗೊಳ್ಳುತ್ತಿದೆ. ಆದರೆ ಅದೇ ಸಮಯದಲ್ಲಿ, ಅದೇ ದಿನ ಸೀಟು ಖಾಲಿಯಾಗುತ್ತದೆ ಎಂದು ಇದರ ಅರ್ಥವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸರಿಯಾದ ಕಾರ್ಯವಿಧಾನವನ್ನು ಜಾರಿಗೆ ತರುವವರೆಗೂ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ” ಎಂದು ಸಿಂಗ್ವಿ ಹೇಳಿದರು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಸೋನಿಯಾ ಇನ್ನೂ ಕೆಲವು ಸಮಯದವರೆಗೆ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ. ಆದರೂ ಪಕ್ಷವು ನಾಯಕತ್ವದ ಮೇಲಿನ ಅನಿಶ್ಚಿತತೆಯನ್ನು ಬೇಗನೆ ಕೊನೆಗೊಳಿಸಬೇಕು ಎಂದು ಹಲವಾರು ಪಕ್ಷದ ಮುಖಂಡರು ಭಾವಿಸಿದ್ದಾರೆ. ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಈಗ ಸಿಡಬ್ಲ್ಯೂಸಿ ಸಭೆ ಕರೆಯಬೇಕಾಗುತ್ತದೆ ಎಂದು ಕೆಲವು ನಾಯಕರು ಊಹಿಸಿದರೆ, ಕಳೆದ ವರ್ಷ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸೋನಿಯಾ ಅವರನ್ನು ಕೇಳಿದಾಗ ಸಿಡಬ್ಲ್ಯೂಸಿ ಯಾವುದೇ ನಿರ್ದಿಷ್ಟ ಸಮಯದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

1 COMMENT

  1. […] ಕಾಂಗ್ರೆಸ್ನ ಪ್ರಿಯಾಂಕ ಗಾಂಧಿ ವಾದ್ರಾ ಅವರು ಗಾಂಧಿಯೇತರ ಅಭ್ಯರ್ಥಿ ಪಕ್ಷದ ಮುಖ್ಯಸ್ಥನಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ, ಸೋನಿಯಾ ಗಾಂಧಿಯವರು ಒಂದು ಪಕ್ಷದ ಮಧ್ಯಂತರ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಕಾರ್ಯವಿಧಾನವು ಜಾರಿಗೆ ಬರುವವರೆಗೆ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಘೋಷಿಸಿತ್ತು. […]

LEAVE A REPLY

Please enter your comment!
Please enter your name here