#CongressToolkitExposed : ಕಾಂಗ್ರೆಸ್ ಪಕ್ಷದ್ದು ಎನ್ನಲಾದ ಟೂಲ್‌ಕಿಟ್ ಒಂದನ್ನು ಬಿಡುಗಡೆ ಮಾಡಿದ ಬಿಜೆಪಿ!

0
118
Tap to know MORE!

ಕಾಂಗ್ರೆಸ್ ಪಕ್ಷವು ಕೊರೋನವೈರಸ್ ಬಿಕ್ಕಟ್ಟನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಮಂಗಳವಾರ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದೆ. ಕೋವಿಡ್ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸುವ ಬಗ್ಗೆ ಟೀಕಿಸಿ, ಪ್ರಧಾನಿ ಮೋದಿಯವರ ಚಿತ್ರಣವನ್ನು ನಾಶಮಾಡಲು ಕಾಂಗ್ರೆಸ್ ಪಕ್ಷ ಟೂಲ್‌ಕಿಟ್‌ಅನ್ನು ತಯಾರಿಸಿದೆ ಎಂದು ಬಿಜೆಪಿ ಆರೋಪಿಸಿದೆ.ಟ್ವಿಟ್ಟರ್‌ನಲ್ಲೂ #CongressToolkitExposed ಟ್ರೆಂಡಿಂಗ್‌ನಲ್ಲಿದೆ. ಆದರೆ, ಕಾಂಗ್ರೆಸ್ ಈ ಆರೋಪವನ್ನು ತಳ್ಳಿ ಹಾಕಿದೆ.

ಹಲವಾರು ಬಿಜೆಪಿ ಮುಖಂಡರು ಟ್ವೀಟ್ ಮಾಡಿರುವ ಟೂಲ್ಕಿಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ “ಟೂಲ್ಕಿಟ್” ನಲ್ಲಿ ಕೊರೋನಾವನ್ನು “ಇಂಡಿಯನ್ ಸ್ಟ್ರೈನ್” ಮತ್ತು “ಮೋದಿ ಸ್ಟ್ರೈನ್” ನಂತಹ ನುಡಿಗಟ್ಟುಗಳಿಂದ ಕರೆಯಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೇಳಿದೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಸುವಂತೆ ಮತ್ತು “ಸೂಪರ್ ಸ್ಪ್ರೆಡರ್ ಕುಂಭ” ಎಂಬ ಪದವನ್ನು ಬಳಸಲು ಕೇಳಿಕೊಂಡಿದೆ..

ಪಂಜಾಬ್: ಮುಸ್ಲಿಂ ಬಾಹುಳ್ಯ ಇರುವ ನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ

ವೈರಲ್ ಆಗಿರುವ Congress toolkitನ ಚಿತ್ರಗಳು

Congress toolkit exposed

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಟೂಲ್‌ಕಿಟ್‌ನ ಮೇಲಿನ ಬಲ ಮೂಲೆಯಲ್ಲಿ ಕಾಂಗ್ರೆಸ್ ಚಿಹ್ನೆಯನ್ನು ಹೊಂದಿದೆ. ತನ್ನ ಪಕ್ಷದ ಕಾರ್ಯಕರ್ತರನ್ನು “ಅಂತ್ಯಕ್ರಿಯೆ ಮತ್ತು ಮೃತದೇಹಗಳ ನಾಟಕೀಯ ಚಿತ್ರಗಳನ್ನು” ಬಳಸುವಂತೆ ಕೇಳಿಕೊಂಡಿದೆ.

ಬಿಜೆಪಿಯ ಹಿಂದೂ ರಾಜಕಾರಣವೇ ಇಷ್ಟು ಸಂಕಟವನ್ನು ಉಂಟುಮಾಡುತ್ತಿದೆ ಎಂಬುದನ್ನು ಜನರಿಗೆ ತೋರಿಸಲು, ‘ಸೂಪರ್ ಸ್ಪ್ರೆಡರ್ ಕುಂಭ’ ಎಂಬ ಪದವನ್ನು ಬಳಸುವುದು ಮುಖ್ಯ ಎಂದು ಕೇಳಿದ್ದಾರೆ.

“ವಿದೇಶಿ ಪತ್ರಕರ್ತರು ಮತ್ತು ಭಾರತದ ಓಪೆಡ್ ಬರಹಗಾರರೊಂದಿಗೆ ಮಾತನಾಡಿ, ವಿದೇಶಿ ಮಾಧ್ಯಮಗಳಲ್ಲಿ ಭಾರತದ ಬಗ್ಗೆ ವಿವರಿಸಿ. ಈಗಾಗಲೇ ವಿದೇಶಿ ಮಾಧ್ಯಮಗಳು ಬಳಕೆ ಮಾಡುತ್ತಿರುವ ಅಂತ್ಯಕ್ರಿಯೆಗಳು ಮತ್ತು ಮೃತದೇಹಗಳ ನಾಟಕೀಯ ಚಿತ್ರಗಳನ್ನು ಬಳಸಿ. ಇದರಿಂದ ಅವರ ವರದಿಯನ್ನು ದೊಡ್ಡದಾಗಿಸಬಹುದು” ಎಂದು ಟೂಲ್ಕಿಟ್ ನಲ್ಲಿ ಉಲ್ಲೇಖಿಸಲಾಗಿದೆ.

ಐವೈಸಿ ಟ್ಯಾಗ್ ಮಾಡಿದ್ದರೆ ಮಾತ್ರ ಸಹಾಯ ಮಾಡಲು ಪ್ರತಿಕ್ರಿಯಿಸಿ
ಟೂಲ್ಕಿಟ್ ನಲ್ಲಿ, ಕಾಂಗ್ರೆಸ್ ಸಂಸ್ಥೆಗಳ ಕೆಲಸವನ್ನು ವರ್ಧಿಸುವ ಬಗ್ಗೆ ಮತ್ತು ಸಹಾಯವನ್ನು ಕೋರಿದ ವ್ಯಕ್ತಿಯು “ಭಾರತೀಯ ಯುವ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದಾಗ ಮಾತ್ರ ಅವರಿಗೆ ಸಹಾಯವನ್ನು ಮಾಡಬೇಕು. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಗ್ರಹಣೆ ಮತ್ತು ಇತರ ಸೌಲಭ್ಯಗಳ ಬಗ್ಗೆಯೂ ಟೂಲ್‌ಕಿಟ್‌ನಲ್ಲಿ ಉಲ್ಲೇಖವಿದೆ.

LEAVE A REPLY

Please enter your comment!
Please enter your name here