ಕೊರೋನಾ : ದ.ಕ 166; ಉಡುಪಿ 245; ಕಾಸರಗೋಡು 168

0
123
Tap to know MORE!

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ನಗರದಿಂದ ಗ್ರಾಮಾಂತರ ಪ್ರದೇಶದಡೆಗೂ ಕೊರೋನಾ ವ್ಯಾಪಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 166 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 6,881 ಗೆ ಏರಿದ್ದು, 3,369 ಪ್ರಕರಣಗಳು ಸಕ್ರಿಯವಾಗಿದೆ.

ಜಿಲ್ಲೆಯಲ್ಲಿಂದು 188 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದರಿಂದಾಗಿ, ಒಟ್ಟು 3,304 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 7 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಸುಮಾರು 208 ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ.3369

ಉಡುಪಿಯಲ್ಲೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಇಂದು 245 ಸೋಂಕಿತರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,605 ಗೆ ಏರಿದೆ.

ಸದ್ಯ 2,389 ಸಕ್ರಿಯ ಪ್ರಕರಣಗಳು ಇದೆ‌. ಸೋಂಕಿನ ಹಾವಳಿ ಮುಂದೆ ಇಂದು 103 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಚೇತರಿಸಿಕೊಂಡವರ ಸಂಖ್ಯೆ 3,161 ಗೆ ಏರಿದೆ. ಜಿಲ್ಲೆಯಲ್ಲಿ ಇಂದು 5 ಸೋಂಕಿತರ ಬಲಿಯಾಗಿದ್ದು, ಇದುವರೆಗೆ 55 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಇಂದು 168 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2,515 ಗೆ ಏರಿದ್ದು, 1,084 ಪ್ರಕರಣಗಳು ಸಕ್ರಿಯವಾಗಿದೆ. ಕೊರೋನಾ ಹಾವಳಿಯ ಮಧ್ಯೆ, ಜಿಲ್ಲೆಯಲ್ಲಿಂದು 123 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 1,419 ಸೋಂಕಿತರು ಚೇತರಿಕೆ ಕಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 10 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೇರಳ ರಾಜ್ಯದಲ್ಲೂ ಬಹಳ ವೇಗವಾಗಿ ಸೋಂಕು ಹರಡುತ್ತಲೇ ಇದೆ. ಇಂದಿನ ವರದಿಯಲ್ಲಿ, ರಾಜ್ಯದಲ್ಲಿ 1,251 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಸಂಪರ್ಕದ ಮೂಲಕವೇ ಸುಮಾರು 1,017 ಜನರು ಸೋಂಕಿಗೆ ತುತ್ತಾಗಿರುತ್ತಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 31,700 ಏರಿಕೆಯಾಗಿದ್ದು, 12,411 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ಕೇರಳ ರಾಜ್ಯದಲ್ಲಿ 814 ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿರುತ್ತಾರೆ. ಇದುವರೆಗೆ ರಾಜ್ಯದಲ್ಲಿ 19,147 ಸೋಂಕಿತರು ಗುಣಮುಖರಾಗಿದ್ದಾರೆ. ಅದಲ್ಲದೆ ರಾಜ್ಯದಲ್ಲಿ ಇಂದು 5 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಒಟ್ಟು 103 ಸೋಂಕಿತರು ಸಾವನ್ನಪ್ಪಿದಂತಾಗಿದೆ.

LEAVE A REPLY

Please enter your comment!
Please enter your name here