ಕೊರೋನಾ : ರಾಜ್ಯದಲ್ಲಿ ದಾಖಲೆಯ 6,805 ಸೋಂಕಿತರ ವರದಿ!

0
134

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗೆ ಪ್ರತಿದಿನ 5-6 ಸಾವಿರ ಹೊಸ ಸೋಂಕಿತರ ವರದಿಯಾಗುತ್ತಿದೆ. ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 1.5 ಲಕ್ಷ ದಾಟಿದೆ.

ರಾಜ್ಯದಲ್ಲಿಂದು ದಾಖಲೆಯ 6,805 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1,58,254 ಗೆ ಏರಿಕೆಯಾಗಿದ್ದು, 75,068 ಪ್ರಕರಣಗಳು ಸಕ್ರಿಯವಾಗಿದೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದಿನ 2,544 ಸೇರಿದಂತೆ, ಒಟ್ಟು ಸೋಂಕಿತರ ಸಂಖ್ಯೆ 67,425ಗೆ ಏರಿದೆ. ಇದರಲ್ಲಿ 32,314 ಪ್ರಕರಣಗಳು ಸಕ್ರಿಯವಾಗಿದೆ. ಬಳ್ಳಾರಿ (4,313) ಮತ್ತು ಮೈಸೂರು (3,784) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 6 ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಮತ್ತು 12 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಬಳ್ಳಾರಿ 431, ಮೈಸೂರು 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡಕ 212, ದಾವಣಗೆರೆ 197, ಕಲಬುರ್ಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಕೊಪ್ಪಳ 132, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ 107 ಹೊಸ ಸೋಂಕಿತರ ವರದಿಯಾಗಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ಒಟ್ಟು 5,602 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 80,281 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸಾವು-ನೋವಿನ ಸಂಖ್ಯೆಯೂ ಏರುತ್ತಿದ್ದು, ಇಂದಿನ 93 ಸೇರಿದಂತೆ ಇದುವರೆಗೆ 2,897 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 1,178 ಸೋಂಕಿತರ ಸಾವಿಗೀಡಾಗಿದ್ದಾರೆ.

LEAVE A REPLY

Please enter your comment!
Please enter your name here