ಕೊರೋನಾ: ರಾಜ್ಯಾದ್ಯಂತ ಮೊದಲ ಬಾರಿಗೆ 7 ಸಾವಿರಕ್ಕೂ ಅಧಿಕ ಸೋಂಕಿತರ ವರದಿ!!

0
159
Tap to know MORE!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗೆ ಪ್ರತಿದಿನ 5-6 ಸಾವಿರ ಹೊಸ ಸೋಂಕಿತರ ವರದಿಯಾಗುತ್ತಿದೆ. ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 1.7 ಲಕ್ಷ ದಾಟಿದೆ.

ರಾಜ್ಯದಲ್ಲಿಂದು ಇದೇ ಮೊದಲ ಬಾರಿಗೆ 7 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಇಂದು 7,178 ಸೋಂಕಿತರನ್ನು ಸೇರಿದಂತೆ, ಒಟ್ಟು ಸೋಂಕಿತರ ಸಂಖ್ಯೆ 1,72,102 ಗೆ ಏರಿಕೆಯಾಗಿದ್ದು, 79,765 ಪ್ರಕರಣಗಳು ಸಕ್ರಿಯವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ 2,665 ಸೇರಿದಂತೆ, ಒಟ್ಟು ಸೋಂಕಿತರ ಸಂಖ್ಯೆ 72,237 ಗೆ ಏರಿದೆ. ಇದರಲ್ಲಿ 33,726 ಪ್ರಕರಣಗಳು ಸಕ್ರಿಯವಾಗಿದೆ. ಬಳ್ಳಾರಿ (4,783) ಮತ್ತು ಮೈಸೂರು (3,886) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 7 ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಮತ್ತು 10 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಬಳ್ಳಾರಿ 607, ಉಡುಪಿ 313, ಬೆಳಗಾವಿ 302, ರಾಯಚೂರು 295, ಕಲಬುರ್ಗಿ 261, ಧಾರವಾಡ 261, ಯಾದಗಿರಿ 200, ದಕ್ಷಿಣ ಕನ್ನಡ 194, ತುಮಕೂರು 177, ಕೊಪ್ಪಳ 163, ಬಾಗಲಕೋಟೆ 149, ವಿಜಯಪುರ 143, ಮೈಸೂರು 138, ಹಾಸನ 136, ದಾವಣಗೆರೆ 132, ಉತ್ತರ ಕನ್ನಡ 117, ಮಂಡ್ಯ 101 ಹೊಸ ಸೋಂಕಿತರ ವರದಿಯಾಗಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ಒಟ್ಟು 5,006 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 89,238 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸಾವು-ನೋವಿನ ಸಂಖ್ಯೆಯೂ ಏರುತ್ತಿದ್ದು, ಇಂದಿನ 93 ಸೇರಿದಂತೆ ಇದುವರೆಗೆ 3,091 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಇದುವರೆಗೆ 1,218 ಸೋಂಕಿತರ ಸಾವಿಗೀಡಾಗಿದ್ದಾರೆ.

LEAVE A REPLY

Please enter your comment!
Please enter your name here