ಕೊರೋನಾ ಗೆದ್ದ 110 ವರ್ಷದ ಸಿದ್ದಮ್ಮ!

0
138
Tap to know MORE!

ಚಿತ್ರದುರ್ಗ: 110 ವರ್ಷದ ಕೋವಿಡ್ ರೋಗಿಯಾದ ಸಿದ್ದಮ್ಮ, ಬಹುಶಃ ಕೊರೋನಾ ಸೋಂಕಿನಿಂದ ಗುಣಮುಖರಾದ ಅತ್ಯಂತ ಹಿರಿಯಳು. 24 ಗಂಟೆಗಳಲ್ಲಿ ಎರಡು ಬಾರಿಯೂ “ನೆಗೆಟಿವ್” ವರದಿ ಬಂದಾಗ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಜುಲೈ 27 ರಂದು ಬುರುಜನಹಟ್ಟಿಯ ಸಿದ್ದಮ್ಮ, ಸೌಮ್ಯ ರೋಗಲಕ್ಷಣಗಳನ್ನು ತೋರಿಸಿದ್ದರು. ಹಾಗಾಗಿ, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸಿದ್ದ ಪರಿಣಾಮ, ನಿನ್ನೆ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಕೊರೋನಾ ಗೆದ್ದ ಸಿದ್ದಮ್ಮರನ್ನು ಆಸ್ಪತ್ರೆಯಿಂದ ಬೀಳ್ಕೊಡುಗೆ ನೀಡಿದ ಸಂದರ್ಭ

“ಕೋವಿಡ್ ಆಸ್ಪತ್ರೆಗೆ ದಾಖಲಾದಾಗ ಮೊದಲು ನಾನು ಭಯಭೀತಳಾಗಿದ್ದೆ. ನನ್ನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಾಸ್ಕ್ ಧರಿಸಿ ವೈದ್ಯರು ಬಂದು, ನನ್ನನ್ನು ಪರೀಕ್ಷಿಸುತ್ತಿದ್ದರು. ಕೆಲವು ಗಂಟೆಗಳಿಗೊಮ್ಮೆ ನನಗೆ ಔಷಧಿಗಳನ್ನು ನೀಡಿದರು. ಈಗ, ನಾನು ಚೆನ್ನಾಗಿಯೇ ಇದ್ದೇನೆ ಮತ್ತು ಮನೆಗೆ ಮರಳುತ್ತಿರುವುದರಿಂದ ಸಂತೋಷವಾಗುತ್ತಿದೆ” ಎಂದು ಸಿದ್ದಮ್ಮ ಅವರ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಆಸ್ಪತ್ರೆಯಲ್ಲಿ ತನ್ನ ದಿನಚರಿ ಬಗ್ಗೆ, ನಿರ್ದಿಷ್ಟವಾದ ಆಹಾರದ ಬಗ್ಗೆ ಮಾತನಾಡುತ್ತಾ, ವಯಸ್ಸಾಗಿದ್ದರಿಂದ ಅಲ್ಲಿ ನೀಡಲಾಗುವ ಗಂಜಿಯೂ ನನಗೆ (ರೈಸ್ ಗ್ರುಯೆಲ್) ಸರಿಯಾಗಿ ರುಚಿಸಲಿಲ್ಲ. ಈ ಹಿಂದೆ ನಾನು ಪ್ರತಿದಿನ ಸಾಂಬಾರ್‌ನೊಂದಿಗೆ ರಾಗಿ ಮುದ್ದೆಯನ್ನು ಸಲೀಸಾಗಿ ತಿನ್ನುತ್ತಿದ್ದೆ. ಆದರೆ ಸುಮಾರು ಒಂದು ವಾರದಿಂದ ನನ್ನ ಅಭಿರುಚಿಯನ್ನು ಕಳೆದುಕೊಂಡಿದ್ದೇನೆ. ನಾನು ಈಗ ನನ್ನ ಹಿಂದಿನ ಆಹಾರಕ್ರಮಕ್ಕೆ ಮರಳಲು ಕಾಯುತ್ತಿದ್ದೇನೆ” ಎಂದರು.

ಸಿದಮ್ಮಾಗೆ ಚಿಕಿತ್ಸೆ ನೀಡಿದ ವೈದ್ಯರು, “ಅವರು ಆರೋಗ್ಯವಾಗಿದ್ದಾರೆ ಮತ್ತು ಅವರ ಚಿಕಿತ್ಸೆಯ ಅವಧಿಯಲ್ಲಿ ಆಕ್ಸಿಜನ್ ಮಟ್ಟವು ಕಡಿಮೆಯಾಗಲೇ ಇಲ್ಲ” ಎಂದು ಹೇಳಿದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅತ್ಯಂತ ಹಳೆಯ ಸೋಂಕಿತೆ ಸಿದ್ದಮ್ಮ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here