ಈ ವರ್ಷದ ಅಂತ್ಯದ ವೇಳೆಗೆ ದೇಶವು ಮಾರಣಾಂತಿಕ ಕರೋನವೈರಸ್ ವಿರುದ್ಧ ಲಸಿಕೆ ನೀಡಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಶನಿವಾರ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ 19 ಲಸಿಕೆಯು 3 ನೇ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದ್ದು, ವರ್ಷದೊಳಗೆ ಲಸಿಕೆ ಬರುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದ್ದಾರೆ. ಭಾರತ ಶೇ. 75 ರಷ್ಟು ಗುಣಮುಖ ರೇಟಿಂಗ್ ಹೊಂದಿದೆ. 2.2 ಮಿಲಿಯನ್ ಕೊರೊನಾ ರೋಗಿಗಳು ಗುಣಮುಖರಾಗಿದ್ದು, 7 ಲಕ್ಷ ಜನ ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.