ಕೊರೋನಾ: ವಿಶ್ವದ ಮೊದಲ ಲಸಿಕೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ ರಷ್ಯಾ!

1
209
ಪ್ರಾತಿನಿಧಿಕ ಚಿತ್ರ
Tap to know MORE!

ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸುವ ಸ್ಪರ್ಧೆಯ ಮಧ್ಯೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೊರೋನವೈರಸ್ ಲಸಿಕೆ ಸಿದ್ಧವಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕೊರೋನಾ ಸಾಂಕ್ರಾಮಿಕಕ್ಕೆ ವಿಶ್ವದ ಮೊದಲ ಲಸಿಕೆ ಎಂದು ಇದನ್ನು ಹೇಳಲಾಗುತ್ತಿದೆ. ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಕ್ಲಿನಿಕಲ್ ಪ್ರಯೋಗಗಳ ಅಂತಿಮ ಹಂತಗಳು ಯಶಸ್ವಿಯಾದಂತೆ,  ಲಸಿಕೆಯ ನೋಂದಣಿ ಪ್ರಕ್ರಿಯೆಗಳು ಪ್ರಾರಂಭವಾದವು.

ಇದನ್ನೂ ಓದಿ: ಕೋವ್ಯಾಕ್ಸಿನ್ – ಮೊದಲ ಹಂತದ ಪ್ರಯೋಗ ಯಶಸ್ವಿ

ಇದನ್ನೂ ಓದಿ: ಕೊರೋನಾ ಲಸಿಕೆಯನ್ನು “ಸ್ಪುಟ್‌ನಿಕ್ – V” ಎಂದು ಹೆಸರಿಸಿದ ರಷ್ಯಾ

ಕೋವಿಡ್ -19 ಲಸಿಕೆ ಬಗ್ಗೆ ಮಾಹಿತಿ ನೀಡುವಂತೆ ರಷ್ಯಾ ಅಧ್ಯಕ್ಷರು, ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಅವರನ್ನು ಕೇಳಿಕೊಂಡರು. ಅದೇ ಸಮಯದಲ್ಲಿ ಪುಟಿನ್ ಮಗಳಿಗೆ ಲಸಿಕೆಯನ್ನು ನೀಡುವುದರೊಂದಿಗೆ ಅದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಇದರಿಂದಾಗಿ, ಕೊವಿಡ್ ಲಸಿಕೆಯನ್ನು ಪಡೆದುಕೊಂಡ ವಿಶ್ವದ ಮೊದಲ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡರು.

ಇದು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು “ಸ್ಥಿರವಾದ ರೋಗನಿರೋಧಕ ಶಕ್ತಿಯನ್ನು ರೂಪಿಸುತ್ತದೆ” ಎಂದು ತಿಳಿದಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.

1 COMMENT

LEAVE A REPLY

Please enter your comment!
Please enter your name here