ಕೊವಿಡ್-19 : ಭಾರತದಲ್ಲಿ ಪರೀಕ್ಷಾ ಪ್ರಮಾಣ ಬಹಳ ಕಡಿಮೆ – ಆರೋಗ್ಯ ಸಂಸ್ಥೆ ವಿಜ್ಞಾನಿ

0
271
Tap to know MORE!

ಕೋವಿಡ್ -19 ನ ಪರೀಕ್ಷೆಯ ಮಹತ್ವವನ್ನು ಒತ್ತಿಹೇಳುತ್ತಾ, ಸಾಂಕ್ರಾಮಿಕ ರೋಗವನ್ನು ಎದುರಿಸಿ ಇತರ ದೇಶಗಳಿಗೆ ಹೋಲಿಸಿದರೆ, ಭಾರತದ ಪರೀಕ್ಷಾ ಪ್ರಮಾಣ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಮಂಗಳವಾರ ಹೇಳಿದ್ದಾರೆ.

“ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಯುಎಸ್ ನಂತಹ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಒಟ್ಟಾರೆಯಾಗಿ ಕಡಿಮೆ ಪರೀಕ್ಷಾ ಪ್ರಮಾಣವನ್ನು ಹೊಂದಿದೆ” ಎಂದು ಅವರು ಹೇಳಿದರು.

ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ ಅವರು, ಪ್ರತಿಯೊಂದು ಸಾರ್ವಜನಿಕ ಆರೋಗ್ಯ ಇಲಾಖೆಯು ಪ್ರತಿ ಮಿಲಿಯನ್‌ಗೆ ಪರೀಕ್ಷಾ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಎಷ್ಟು ಎಂಬ ಮಾನದಂಡಗಳನ್ನು ಹೊಂದಿರಬೇಕು ಎಂದು ಹೇಳಿದರು.

ಪರೀಕ್ಷೆಯು ಅತ್ಯಂತ ಮುಖ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಒತ್ತಿಹೇಳುತ್ತಿದೆ ಎಂದು ಅವರು ಹೇಳಿದರು. “ನಾವು ಸಮರ್ಪಕವಾಗಿ ಪರೀಕ್ಷೆ ಮಾಡದಿದ್ದರೆ, ವೈರಸ್ ಎಲ್ಲಿದೆ ಎಂದು ನಮಗೆ ತಿಳಿಯುವುದಿಲ್ಲ. ನೀವು ಪರೀಕ್ಷಿಸದಿದ್ದರೆ, ಬೆಂಕಿಯ ವಿರುದ್ಧ ಕಣ್ಣುಮುಚ್ಚಿ ಹೋರಾಡಿದಂತೆ ಆಗುತ್ತದೆ. ನಾವು ಪರೀಕ್ಷಿಸಬೇಕು, ಪರೀಕ್ಷಿಸಬೇಕು ಮತ್ತು ಪರೀಕ್ಷಿಸಬೇಕು.”

ಸ್ವಾಮಿನಾಥನ್ ಅವರು ಮುಂದಿನ 12 ತಿಂಗಳುಗಳವರೆಗೆ, ಪ್ರತಿ ದೇಶಗಳು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಹೇಳಿದರು. ಉತ್ತಮ ಆಡಳಿತ, ವೈಜ್ಞಾನಿಕ ಜ್ಞಾನದ ಆಧಾರದ ಮೇಲೆ ಉತ್ತಮ ಕಾರ್ಯತಂತ್ರದ ಯೋಜನೆ ಮತ್ತು ಪುರಾವೆಗಳು ಮತ್ತು ಸಮುದಾಯ ಮತ್ತು ವೈಯಕ್ತಿಕ ನಂಬಿಕೆಯ ಒಳಗೊಳ್ಳುವಿಕೆ ಮತ್ತು ಸರ್ಕಾರ ಹಾಗೂ ಜನರ ನಡುವೆ ಉತ್ತಮ ಸಂವಹನದಿಂದಾಗಿ ಕೆಲವು ದೇಶಗಳು ಮೊದಲ ಹಂತದಲ್ಲಿ ವೈರಸ್‌ನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿವೆ ಎಂದರು.

ಆದಾಗ್ಯೂ, ಪರೀಕ್ಷೆಯಿಂದ ಮಾತ್ರ ಸಮಸ್ಯೆಯು ಪರಿಹಾರವಾಗಲ್ಲ. ಅದರೊಂದಿಗೆ, ಸೋಂಕಿತರನ್ನು ಪ್ರತ್ಯೇಕಿಸುವುದು, ಅವರ ಸಂಪರ್ಕವನ್ನು ಪತ್ತೆಹಚ್ಚುವುದು, ಸಂಪರ್ಕಿಸುವುದು, ಸೋಂಕಿತರನ್ನು ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here