ಕೊರೋನಾ ಲಸಿಕೆಯನ್ನು “ಸ್ಪುಟ್‌ನಿಕ್ – V” ಎಂದು ಹೆಸರಿಸಿದ ರಷ್ಯಾ

1
146
ಪ್ರಾತಿನಿಧಿಕ ಚಿತ್ರ
Tap to know MORE!

ಕೊರೋನಾ ಸೋಂಕಿಗೆ, ರಷ್ಯಾ ದೇಶವು ವಿಶ್ವದ ಮೊದಲ ಲಸಿಕೆಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅದನ್ನು ‘ಸ್ಪುಟ್ನಿಕ್ V’ ನ ಎಂದು ಹೆಸರಿಸಿದೆ ಎಂದು ದೇಶದ ಸಾರ್ವಭೌಮ ಸಂಪತ್ತಿನ ನಿಧಿಯ ಮುಖ್ಯಸ್ಥರು ತಿಳಿಸಿದ್ದಾರೆ. ಕೊರೋನಾ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ದೇಶ ರಷ್ಯಾ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದರು. ಇಂದು ನಡೆದ ಸರ್ಕಾರದ ಸಭೆಯಲ್ಲಿ ಅವರು ಇದನ್ನು ಅಧಿಕೃತವಾಗಿ ಪ್ರಕಟಿಸಿದರು.

ಅದಲ್ಲದೆ ಅವರ ಮಗಳಿಗೆ ಈಗಾಗಲೇ ಚುಚ್ಚುಮದ್ದು ನೀಡಲಾಗಿದೆ ಎಂದು ರಷ್ಯಾದ ಅಧ್ಯಕ್ಷರು ದೃಢಪಡಿಸಿದರು.

ವಿಶ್ವದ ಮೊದಲ ಕೊರೋನಾ ಲಸಿಕೆಯನ್ನು ಬಿಡುಗಡೆ ಮಾಡಿದ ರಷ್ಯಾ

ಲಸಿಕೆಗೆ ಹಣಕಾಸು ಒದಗಿಸುವ ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಮಾತನಾಡಿ, ಲಸಿಕೆಯ 3 ನೇ ಹಂತದ ಪ್ರಯೋಗಗಳು ಬುಧವಾರದಿಂದ ಪ್ರಾರಂಭವಾಗಲಿವೆ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಸೆಪ್ಟೆಂಬರ್‌ನಿಂದ ಪ್ರಾರಂಭಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು. ಈಗಾಗಲೇ ಸುಮಾರು 20 ದೇಶಗಳು, ಒಂದು ಬಿಲಿಯನ್‌ಗಿಂತ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಕೇಳಿದ್ದಾರೆ ಎಂದು ಡಿಮಿಟ್ರಿವ್ ಮಾಹಿತಿ ನೀಡಿದರು.

ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಅವರ ಪ್ರಕಾರ, ಲಸಿಕೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ಬಿನ್ನೋಫಾರ್ಮ್ ಎಂಬ ಎರಡು ತಾಣಗಳಲ್ಲಿ ಉತ್ಪಾದಿಸಲಾಗುವುದು.

1 COMMENT

LEAVE A REPLY

Please enter your comment!
Please enter your name here