ನೌಕರರಿಗೆ ಉಚಿತ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್ ತೆರೆದ ಕೆಎಸ್‌ಆರ್‌ಟಿಸಿ

0
149
Tap to know MORE!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹಲವಾರು ಇತರ ಸಂಸ್ಥೆಗಳೊಂದಿಗೆ ಸೇರಿಕೊಂಡು, ನೂತನವಾದ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಅನ್ನು ತೆರೆದಿದೆ. ಅದರಲ್ಲಿ ಶೇಕಡಾ 50 ಹಾಸಿಗೆಗಳು, ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರಿಗಾಗಿವೆ ಮತ್ತು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಭಿವೃದ್ಧಿಪಡಿಸಲಾಗಿರುವ ಕೆಎಸ್‌ಆರ್‌ಟಿಸಿ ಸಿಸಿಸಿ ಮೊದಲ ಹಂತದಲ್ಲಿ 200 ಹಾಸಿಗೆಗಳನ್ನು ಹೊಂದಿದ್ದು, ಬೇಡಿಕೆ ಹೆಚ್ಚಾದಂತೆ 100 ರಷ್ಟು ಹೆಚ್ಚಿಸಲಿದೆ.

“ಸಿಸಿಸಿ ಸ್ಥಾಪನೆಗಾಗಿ ಕೆಎಸ್‌ಆರ್‌ಟಿಸಿಯು ಬೆಂಗಳೂರಿನ ಪೀಣ್ಯದಲ್ಲಿರುವ ಶ್ರೀ ಬಸ್ವೇಶ್ವರ ಬಸ್ ನಿಲ್ದಾಣದ ಆವರಣದ ನೆಲ ಮಹಡಿ ಮತ್ತು ಮೊದಲ ಮಹಡಿಯನ್ನು ಒದಗಿಸಿದೆ” ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಯು ರೋಟರಿ, ಟೈಟಾನ್, ಅಡ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್‌ನೊಂದಿಗೆ ಕೈಜೋಡಿಸಿ ಸೋಂಕಿಗೆ ಒಳಗಾಗುವ ನೌಕರರಿಗೆ ಸಹಾಯ ಮಾಡುತ್ತದೆ.

ಈ ಕೇಂದ್ರವನ್ನು ವೈದ್ಯಕೀಯ ಪಾಲುದಾರ ಪ್ರಕ್ರಿಯಾ ಆಸ್ಪತ್ರೆಗಳು ನಡೆಸಲಿದ್ದು, ಟೈಟಾನ್ ಪ್ರಮುಖ ಧನಸಹಾಯ ಪಾಲುದಾರವಾಗಿದೆ.

ಸಾರಿಗೆ ಸಚಿವ ಲಕ್ಷ್ಮಣ್ ಸವದಿ , ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಮತ್ತು ಇತರರ ಸಮ್ಮುಖದಲ್ಲಿ ಈ ಕೇಂದ್ರವನ್ನು ಇಂದು ಉದ್ಘಾಟಿಸಿದರು.

ಕೆಎಸ್‌ಆರ್‌ಟಿಸಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಎನ್‌ಕೆಆರ್‌ಟಿಸಿ) ನೌಕರರಿಗೆ ಇದು ಸಹಕಾರಿಯಾಗಲಿದೆ. ಅಧಿಕಾರಿಯ ಪ್ರಕಾರ, ನಾಲ್ಕು ನಿಗಮಗಳಲ್ಲಿ ಸುಮಾರು 1,000 ನೌಕರರಿಗೆ ಸೋಂಕು ತಗುಲಿದ್ದು, ಇದುವರೆಗೆ 700 ಸೋಂಕಿತರು ಚೇತರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here