ಭಾರಿ ಸುದ್ದಿಯಲ್ಲಿದೆ #Covid20 ! ಇಂಗ್ಲೆಂಡ್‌ನಲ್ಲಿ ನಿಯಂತ್ರಣ ಮೀರಿದ ಹೊಸ ರೂಪದ ಕೊರೋನಾ!

0
278
Tap to know MORE!

ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್‌ನಲ್ಲಿ ವಿಧಿಸಲಾದ ಕಟ್ಟುನಿಟ್ಟಾದ ಲಾಕ್‌ಡೌನ್ ಇನ್ನೂ ಒಂದು ತಿಂಗಳು ಇರಬಹುದು ಎಂದು ಬ್ರಿಟನ್‌ನ ಆರೋಗ್ಯ ಸಚಿವರು ಎಚ್ಚರಿಸಿದ್ದಾರೆ. ಕೊರೋನವೈರಸ್‌ನ ಹೊಸ ಅಲೆಯು ನಮ್ಮ ನಿಯಂತ್ರಣದಲ್ಲಿಲ್ಲ ಎಂದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಕೋವಿಡ್-19 ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ, “ಎಲ್ಲರೂ ಕ್ರಿಸ್‌ಮಸ್ ಯೋಜನೆಗಳನ್ನು ಈ ಕೂಡಲೆ ರದ್ದುಗೊಳಿಸಬೇಕು ಮತ್ತು ಈ ಕ್ಷಣದಿಂದ ಮನೆಯಲ್ಲಿಯೇ ಇರಬೇಕು” ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಶನಿವಾರ ಘೋಷಿಸಿದ್ದರು.

ಇದನ್ನೂ ಓದಿ: ರೈತರ ಪ್ರತಿಭಟನೆ | ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ!

ಈ ಕಾರಣದಿಂದಾಗಿ ವಿಶ್ವದಾದ್ಯಂತ, ಎಲ್ಲರೂ ಕೊರೋನಾ ಸೋಂಕಿನ ಹೊಸ ರೂಪದ ಬಗ್ಗೆ ಆತಂಕಿತರಾಗಿದ್ದಾರೆ. ಹಾಗಾಗಿ ಅದನ್ನು Covid20 ಎಂದೂ ಕೆಲವರು ಹೆಸರಿಸಿದ್ದಾರೆ.

“ನಾವು ಬಹಳ ಬೇಗನೆ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸಿದ್ದೇವೆ” ಎಂದು ತಿಳಿಸಿದ ಪ್ರಧಾನಿ, “ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ” ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸುತ್ತಾರೆ. “ದುರದೃಷ್ಟವಶಾತ್ ಹೊಸ ಒತ್ತಡವು ನಿಯಂತ್ರಣದಲ್ಲಿಲ್ಲ. ನಾವು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ ” ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ವಾರಾಂತ್ಯದಲ್ಲಿ ಸುಮಾರು 5 ಲಕ್ಷ ಜನರಿಗೆ ಲಸಿಕೆ ನೀಡಲು ಇಂಗ್ಲೆಂಡ್ ತಯಾರಿ ನಡೆಸುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ರಾಹುಲ್ ಗಾಂಧಿ ಅಧ್ಯಕ್ಷ?

LEAVE A REPLY

Please enter your comment!
Please enter your name here