ಪ್ರವಾದಿ ಮೊಹಮ್ಮದ್‌ರನ್ನು ನಿಂದಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು : ಯು.ಟಿ.ಖಾದರ್

0
263
Tap to know MORE!

“ಲೋಕಕ್ಕೆ ಸೌಹಾರ್ದತೆ,ಸಮಾನತೆ ಹಾಗೂ ಮಾನವೀಯತೆ ಸಾರಿದ ವಿಶ್ವ ಪ್ರವಾದಿ ಮೊಹಮ್ಮದ್‌ರವರನ್ನು ನಿಂದನೆ ಮಾಡಿದವರ ವಿರುದ್ದ ಗರಿಷ್ಠ ಕ್ರಮ ಕೈಗೊಳ್ಳಲೇ ಬೇಕು” ಎಂದು ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಈ ಹೇಳಿಕೆಯು ಬೆಂಗಳೂರಿನ ಕಾವಲ ಬೈರಸಂದ್ರದಲ್ಲಿ ನಿನ್ನೆ ತಡರಾತ್ರಿ ನಡೆದ ಅಹಿತಕರ ಘಟನೆಯ ಬಳಿಕ ಬಂದಿದೆ.

“ಇದೇ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡುವುದನ್ನ ಒಪ್ಪುಲು ಸಾಧ್ಯವೇ ಇಲ್ಲ” ಎಂದಿದ್ದಾರೆ.

“ಬೆಂಕಿ ಹಚ್ಚುವುದು ನಮ್ಮ‌ ಸಂಸ್ಕೃತಿಯಲ್ಲ,ಏನೇ ಇದ್ದರೂ ಈ ನೆಲದ ಕಾನೂನೇ ಅಂತಿಮ. ಕಾನೂನು ಹೋರಾಟದಲ್ಲಿ ನಂಬಿಕೆ ಇಟ್ಟುಕೊಳ್ಳಿ. ಕೇವಲ ಬೆಂಗಳೂರಷ್ಟೇ ಅಲ್ಲ ರಾಜ್ಯದ ಯಾವುದೇ ಹಳ್ಳಿಯಲ್ಲೂ ಇಂತಹ ಘಟನೆಗೆ ಅವಕಾಶ ನೀಡಬಾರದು” ಎಂದು ಹೇಳಿದ ಖಾದರ್, ಎಲ್ಲೆಡೆ ಶಾಂತಿಯನ್ನು ಕಾಪಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ಶಾಸಕರ ಮನೆ ಮೇಲೆ ದಾಳಿ – ಗೋಲಿಬಾರ್ ಗೆ ಮೂವರು ಬಲಿ

ಪೋಲಿಸ್ ಇಲಾಖೆಯು ಧಾರ್ಮಿಕ ನಿಂದನೆಯಂತಹ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಇತ್ಯರ್ಥಗೊಳಿಸಿದ್ರೆ ಪರಿಸ್ಥಿತಿ ಕೈ ಮೀರಿ ಹೋಗುವುತ್ತಿರಲಿಲ್ಲ. ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಅಷ್ಟೆ” ಎಂದರು.

ಆಗ

LEAVE A REPLY

Please enter your comment!
Please enter your name here