ಸರ್ಕಾರಕ್ಕೆ ಮತ್ತು ಹಿಂದೂಗಳಿಗೆ ಪಾಠ ಕಲಿಸಲು ದೆಹಲಿಯಲ್ಲಿ ಯೋಜಿತ ಗಲಭೆ – ತಪ್ಪೊಪ್ಪಿಕೊಂಡ ತಾಹಿರ್!

0
399
Tap to know MORE!

ಅಮಾನತುಗೊಂಡಿರುವ ಆಮ ಆದ್ಮಿ ಪಕ್ಷದ(ಆಪ್) ಕೌನ್ಸಿಲರ್ ತಾಹಿರ್ ಹುಸೇನ್ ಅವರು ದೆಹಲಿ ಗಲಭೆಯಲ್ಲಿ ಭಾಗಿಯಾಗಿರುವುದನ್ನು “ಒಪ್ಪಿಕೊಂಡಿದ್ದಾರೆ” ಎಂದು ವರದಿಯಾಗಿದೆ. “ಸರ್ಕಾರವು ಸಿಎಎ ಹಿಂಪಡೆಯಲು ಮತ್ತು ದೇಶದ ಹಿಂದೂಗಳಿಗೆ ಪಾಠವನ್ನು ಕಲಿಸಲು ಈ ಕೆಲಸಕ್ಕೆ ಕೈ ಹಾಕಿದೆ ಎಂದಿದ್ದಾರೆ. ಈ ಹೇಳಿಕೆಯು ಈಗ ಆತನ ವಿರುದ್ಧ ದಾಖಲಾದ ಚಾರ್ಜ್‌ಶೀಟ್‌ನ ಒಂದು ಭಾಗವಾಗಿದೆ.

370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಖಲೀದ್ ಸೈಫಿ (ಯುನೈಟೆಡ್ ಎಗೇನ್ಸ್ಟ್ ಹೇಟ್) ನನ್ನನ್ನು ಭೇಟಿಯಾದರು ಮತ್ತು ಇನ್ನು ಮುಂದೆ ಸುಮ್ಮನಿರಲು ಯಾವುದೇ ಅರ್ಥವಿಲ್ಲ ಎಂದು ಹೇಳಿದರು. ನಂತರ ಸುಪ್ರೀಂ ಕೋರ್ಟ್ ರಾಮ್ ಮಂದಿರದ ಪರ ಆದೇಶ ನೀಡಿ, ಬಳಿಕ ನಾಗರಿಕ ತಿದ್ದುಪಡಿ ಕಾಯ್ದೆಯನ್ನೂ ಜಾರಿಗೆ ತರಲಾಯಿತು. ಇದಕ್ಕಾಗಿ ಏನಾದರೂ ಮಾಡಬೇಕಾಗಿದೆ ಎಂದು ನಾನು ಭಾವಿಸಿದೆ “ಎಂದು ತಾಹಿರ್ ತನ್ನ ವಿಚಾರಣಾಧಿಕಾರಿಗಳಿಗೆ ಹೇಳಿದ್ದಾನೆ.

“ಜನವರಿ 8 ರಂದು, ಕಹ್ಲಿದ್ ಸೈಫಿ ಅವರು ಮಾಜಿ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್ ಕಹ್ಲಿದ್ ಅವರಿಗೆ ಶಾಹೀನ್ ಬಾಗ್‌ನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಯಲ್ಲಿ ನನ್ನನ್ನು ಪರಿಚಯಿಸಿದರು” ಎಂದು ಅವರು ಹೇಳಿದ್ದಾರೆ.

ಪಿಎಫ್‌ಐ ಸಂಸ್ಥೆ ನಮಗೆ ಹಣಕಾಸು ಒದಗಿಸುತ್ತದೆ ಎಂದು ಸೈಫಿ ಹೇಳಿದ್ದರು ಎಂದು ತಾಹಿರ್ ಹೇಳಿದ್ದಾರೆ. ಕಳೆದ ಡಿಸೆಂಬರ್‌ನಿಂದ, ಜಾರಿ ನಿರ್ದೇಶನಾಲಯ ಮತ್ತು ದೆಹಲಿ ಪೊಲೀಸರು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್‌ಐ ಪಾತ್ರವನ್ನು ಪರಿಶೀಲಿಸುತ್ತಿದೆ.

“ನಾನು ಗಾಜಿನ ಬಾಟಲಿಗಳು, ಪೆಟ್ರೋಲ್, ವಾಣಿಜ್ಯಿಕವಾಗಿ ಬಳಸಿದ ಆಸಿಡ್, ಕಲ್ಲುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ ಮತ್ತು ಅವುಗಳನ್ನು ನನ್ನ ಮನೆಯ ಟೆರೇಸ್‌ನಲ್ಲಿ ಇರಿಸಿದ್ದೆ” ಎಂದು ತಾಹಿರ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾನೆ. ಶಾಹೀನ್ ಬಾಗ್‌ನಂತೆಯೇ ಖುರೇಜಿಯಲ್ಲಿ ಧರಣಿ ಪ್ರತಿಭಟನೆ ನಡೆಸಲು ಸೈಫಿ ತನ್ನ ಸಹವರ್ತಿ ಇಶ್ರತ್‌ನನ್ನು ಕರೆದೊಯ್ದನು. ಶೀಘ್ರದಲ್ಲೇ ಈಶಾನ್ಯ ದೆಹಲಿಯ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು.

ವಿಚಾರಣೆಯ ವರದಿಯ ಪ್ರಕಾರ, ಖಲೀದ್ ಸೈಫಿಗೆ ದೊಡ್ಡ ಜನಸಮೂಹವನ್ನು ಸಜ್ಜುಗೊಳಿಸುವ ಮತ್ತು ರಾಜಧಾನಿಯಾದ್ಯಂತ ಬೀದಿ ಪ್ರತಿಭಟನೆಗಳನ್ನು ಆಯೋಜಿಸುವ ಕಾರ್ಯವನ್ನು ನೀಡಲಾಗಿತ್ತು. ಇದರಿಂದಾಗಿ ಸರ್ಕಾರವು ಒತ್ತಡಕ್ಕೆ ಸಿಲುಕುತ್ತದೆ ಮತ್ತು ಸಿಎಎ ಅನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಊಹಿಸಲಾಗಿತ್ತು.

LEAVE A REPLY

Please enter your comment!
Please enter your name here