ದ.ಕ, ಉಡುಪಿ ಜಿಲ್ಲಾ ಮಟ್ಟದ ಮುದ್ದು ಕೃಷ್ಣವೇಷ ಭಾವಚಿತ್ರ ಸ್ಪರ್ಧೆಗೆ ಆಹ್ವಾನ

0
528
Tap to know MORE!

ಹಳೆಯಂಗಡಿ: ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ದ.ಕ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮುದ್ದು ಕೃಷ್ಣವೇಷ ಭಾವಚಿತ್ರ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಭಾಗವಹಿಸುವವರು, ಮುದ್ದು ಕೃಷ್ಣ ಭಾವಚಿತ್ರವನ್ನು, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಆಗಸ್ಟ್ 23ರ ಒಳಗಾಗಿ ಯುವಕ ಮಂಡಲದ ವಿಳಾಸಕ್ಕೆ ಕಳುಹಿಸಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಪರ್ಧೆ ನಿಯಮಗಳು

  • ಸ್ಪರ್ಧೆಯಲ್ಲಿ 6 ವರ್ಷದ ಕೆಳಗಿನ ಮಕ್ಕಳು ಭಾಗವಹಿಸಲು ಮುಕ್ತ ಅವಕಾಶ
  • ವಾಟರ್‌ಮಾರ್ಕ್ ಇರದ ಮತ್ತು ಯಾವುದೇ ಎಡಿಟಿಂಗ್ ಮಾಡದ ಮೂಲ ಭಾವಚಿತ್ರಗಳಿಗೆ ಮಾತ್ರ ಪ್ರಾಶಸ್ತ್ಯ
  • ಆಯೋಜಕರು ಅಪೇಕ್ಷಿಸಿದರೆ, ಬಹುಮಾನ ವಿತರಣೆಯ ದಿನ ಕೃಷ್ಣ ವೇಷದಲ್ಲಿ ಬರಬೇಕಾಗುತ್ತದೆ.
  • ಭಾವಚಿತ್ರವು 5*7 ಅಳತೆಯಲ್ಲಿ ಇರಬೇಕು
  • ಒಬ್ಬ ಸ್ಪರ್ಧಿಗೆ ಕೇವಲ ಒಂದು ಭಾವಚಿತ್ರ ಕಳುಹಿಸಲು ಅವಕಾಶ
  • ಮಗುವಿನ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯ
  • ಭಾವಚಿತ್ರದ ಜೊತೆಗೆ, ಮಗುವಿನ ಹೆತ್ತವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕವಾಗಿ ಕಳುಹಿಸಿ ಕೊಡಬೇಕು.

ತಲುಪಿಸಬೇಕಾದ ವಿಳಾಸ :

ಅಂಚೆ ವಿಳಾಸ : ಕಾರ್ಯದರ್ಶಿ,  ಶ್ರೀ ವಿದ್ಯಾವಿನಾಯಕ ಯುವಕ ಮಂಡಲ(ರಿ),  ಪಂಡಿತ್ ಹರಿ ಭಟ್ ರಸ್ತೆ, ಹಳೆಯಂಗಡಿ

ಈಮೇಲ್ ವಿಳಾಸ :  vidyavinayaka1970@yahoo.com

ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಲಾಗುವುದು. ಅಲ್ಲದೇ 3 ಪ್ರೋತ್ಸಾಹಕ ಬಹುಮಾನಗಳೂ ಇವೆ. ಬಹುಮಾನ ವಿತರಣೆಯನ್ನು ಆಗಸ್ಟ್ 30 ರಂದು ಯುವಕ ಮಂಡಲದ ಸಭಾಂಗಣದಲ್ಲಿ ಮಾಡಲಾಗುವುದು ಎಂದು ಮಂಡಲದ ಅಧಿಕೃತ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ, ಯುವಕ ಮಂಡಲದ ಅಧಿಕೃತ ಪ್ರಕಟಣೆ

LEAVE A REPLY

Please enter your comment!
Please enter your name here