ದೇವಾಲಯಗಳನ್ನು ಮಸೀದಿಗಳಿಂದ ಬಂಧ ಮುಕ್ತಗೊಳಿಸುವುದೇ ನಿಜವಾದ ಸ್ವಾತಂತ್ರ್ಯ : ಈಶ್ವರಪ್ಪ

0
129
Tap to know MORE!

ಶಿವಮೊಗ್ಗ: ಕಾಶಿ ಮತ್ತು ಮಥುರಾದ ದೇವಾಲಯಗಳನ್ನು ಮಸೀದಿಗಳಿಂದ ಮುಕ್ತಗೊಳಿಸಬೇಕು. ಈ ಕಾರ್ಯದಲ್ಲಿ ನಾನು ಜೈಲಿಗೆ ಹೋಗಲೂ ಸಿದ್ಧ. ಜೀವನ ಪರ್ಯಂತ ಜೈಲು ವಾಸ ಅನುಭವಿಸುವೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಮಂಗಳವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಥುರಾ ಶ್ರೀಕೃಷ್ಣನ ಜನ್ಮಸ್ಥಳ ಮತ್ತು ಕಾಶಿಯು ವಿಶ್ವನಾಥನ ಜನ್ಮಸ್ಥಳವಾಗಿದೆ. ಅಲ್ಲಿನ ದೇವಾಲಯಗಳನ್ನು ನೆಲಸಮಗೊಳಿಸಿ, ಮಸೀದಿಗಳನ್ನು ನಿರ್ಮಿಸಲಾಗಿತ್ತು. ಇತಿಹಾಸದಲ್ಲಿ, ಅವು ರಾಷ್ಟ್ರದ ಹಿಂದೂಗಳ ಧಾರ್ಮಿಕ ಕೇಂದ್ರಗಳಾಗಿದ್ದವು. ಆದರೆ ಇಂದಿನ ದಿನಗಳಲ್ಲಿ, ಈ ಸ್ಥಳಗಳಿಗೆ ಭೇಟಿ ನೀಡುವವರು ಮಸೀದಿಗಳಿರುವುದರಿಂದ, ಇಂದಿಗೂ ಗುಲಾಮಗಿರಿಯ ಭಾವನೆಯನ್ನು ಅನುಭವಿಸುತ್ತಾರೆ. ಆದ್ದರಿಂದ ಅಲ್ಲಿ ಮಸೀದಿಯನ್ನು ನೆಲಸಮಗೊಳಿಸಿ ಮರಳಿ ದೇವಾಲಯಗಳನ್ನು ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ : ಧರ್ಮದ ಉಳಿವಿಗಾಗಿ ಹಿಂದೂಗಳೇ ಅಧಿಕಾರದಲ್ಲಿರಬೇಕು : ತೇಜಸ್ವಿ ಸೂರ್ಯ

ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಭಾರತದಲ್ಲಿ ಸಾವಿರಾರು ಮಸೀದಿಗಳಿವೆ ಎಂದು ಹೇಳಿದ ಅವರು, ನಾವು ಅವರನ್ನು ವಿರೋಧಿಸುತ್ತಿಲ್ಲ. ಆದರೆ ದೇವಾಲಯಗಳನ್ನು ನೆಲಸಮಗೊಳಿಸುವ ಮೂಲಕ ಎರಡೂ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು ಎಂದರು.

ಭಾರತದ ನಿಜವಾದ ಸ್ವಾತಂತ್ರ್ಯವು ರಸ್ತೆಗಳು, ಕಟ್ಟಡಗಳನ್ನು ನಿರ್ಮಿಸುವುದರ ಮೇಲೆ ಅಲ್ಲ. ಬದಲಾಗಿ, ಧಾರ್ಮಿಕ ಕೇಂದ್ರಗಳನ್ನು ಹಿಂದೂಯೇತರ ಸಂಸ್ಕೃತಿಯಿಂದ ಮುಕ್ತಗೊಳಿಸುವುದನ್ನು ಆಧರಿಸಿದೆ ಎಂದು ಅವರು ಹೇಳಿದರು. ಇದು ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಜೆಡಿ (ಎಸ್) ನಲ್ಲಿ ಹಿಂದೂ ಧರ್ಮದ ನಾಯಕರ ಅಭಿಪ್ರಾಯವೂ ಆಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here