FACT CHECK: ತನ್ನ ದೇಶದ ಯುದ್ಧ ವಿಮಾನಕ್ಕೆ ಮೃತ ಸೌಮ್ಯ ಅವರ ಹೆಸರನ್ನು ಇಡಲಿಲ್ಲ ಇಸ್ರೇಲ್!

0
96
Tap to know MORE!

ನವದೆಹಲಿ: ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಲ್ಲಿ ಭಾರತ ಮೂಲದ ದಾದಿ ಸೇರಿದಂತೆ ನೂರಾರು ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮೃತ ವ್ಯಕ್ತಿ, ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಂತೋಷ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಸ್ರೇಲ್ ದೇಶವು ತನ್ನ ಸೇನೆಯಲ್ಲಿರುವ ಯುದ್ಧವಿಮಾನಕ್ಕೆ ಸೌಮ್ಯ ಅವರ ಹೆಸರು ಇಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಮಾನದ ಮೇಲೆ ಸೌಮ್ಯ ಅವರ ಹೆಸರನ್ನು ಬರೆದಿರುವ ಚಿತ್ರ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ.

ಇಸ್ರೇಲ್ ಸೌಮ್ಯ Israel sowmya

ರಿವರ್ಸ್ ಇಮೇಜ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ, ಚಿತ್ರವ‌ನ್ನು ತಿರುಚಿರುವುದು ಕಂಡುಬಂದಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ವೈರಲ್ ಆಗಿರುವ ಚಿತ್ರದಲ್ಲಿ ವಿಮಾನದ ಮೇಲೆ ಸೌಮ್ಯ ಅವರ ಹೆಸರನ್ನು ಕೃತಕವಾಗಿ ಸೇರಿಸಲಾಗಿದೆ ಎಂಬುದು ಕಂಡುಬಂದಿದೆ. ಚಿತ್ರದಲ್ಲಿರುವುದು ಚೀನಾ ಸೇನೆಯ ಚಂಗ್ಡು ಜೆ10 ಯುದ್ಧವಿಮಾನ. ಮೂಲ ಚಿತ್ರವನ್ನು 2020ರಲ್ಲಿ ಚೀನಾದ ಟೆನ್‌ಸೆಂಟ್ ಹಾಗೂ ಡೆಡೆ ನ್ಯೂಸ್ ಪ್ರಕಟಿಸಿದ್ದವು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here