ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣ – ವಿಷ ಸೇವಿಸಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ

0
640
Tap to know MORE!

ಹಾವೇರಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಜಿಲ್ಲೆಯ ಇಬ್ಬರು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡೂ ಪ್ರಕರಣಗಳು ಪ್ರತ್ಯೇಕ ಸನ್ನಿವೇಶದಲ್ಲಿ ಸಂಭವಿಸಿದೆ.

ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ ಎಂದು ತಿಳಿದ ನಂತರ, ನಗರದ ಗೆಳೆಯರ ಬಳಗ ಆಂಗ್ಲ ಮಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ರಿಟ್ಟಿ ವಿಷ ಸೇವಿಸಿದ್ದಾಳೆ. ಮತ್ತೊಬ್ಬಳು ಬೈಡಗಿ ತಾಲ್ಲೂಕಿನ ಕಾಗಿನೆಲೆ ಪ್ರೌಢಶಾಲೆಯ ವಿದ್ಯಾರ್ಥಿನಿ, ಭಾರತಿ ಕೋಟಿ ತನ್ನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ-   ಯಾವ ಜಿಲ್ಲೆ ರಾಜ್ಯಕ್ಕೆ ಟಾಪ್ ?

ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಯಿತು. ಶಾಸಕ ನೆಹರು ಒಲೆಕರ್, ಎರಡೂ ಕುಟುಂಬದ ದುಃಖಿತ ಸದಸ್ಯರನ್ನು ಸಮಾಧಾನಪಡಿಸಿದರು.

LEAVE A REPLY

Please enter your comment!
Please enter your name here