ಗೂಗಲ್ ಪ್ಲೇ ಸ್ಟೋರ್‌ಗೆ ಕಾಲಿಟ್ಟ FAU-G | ಪೂರ್ವ ನೋಂದಣಿ ಆರಂಭ!

0
146
Tap to know MORE!

ಬಹು ನಿರೀಕ್ಷಿತ ಆಕ್ಷನ್ ಗೇಮ್ FAU-G ಅಥವಾ ಫಿಯರ್‌ಲೆಸ್ ಆಂಡ್ ಯುನೈಟೆಡ್ ಗಾರ್ಡ್ಸ್ ಆಟದ ಪೂರ್ವ-ನೋಂದಣಿ ಪ್ರಾರಂಭವಾಗಿದೆ. ಈ ಗೇಮ್ ಅನ್ನು ಬೆಂಗಳೂರು ಮೂಲದ ಮೊಬೈಲ್ ಗೇಮ್ಸ್ ಮತ್ತು ಇಂಟರಾಕ್ಟಿವ್ ಎಂಟರ್‌ಟೈನ್‌ಮೆಂಟ್ ಕಂಪನಿಯಾದ ಎನ್‌ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದೆ.

ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳಾಂತ್ಯದಲ್ಲಿ, ಜನಪ್ರಿಯ ಮೊಬೈಲ್ ಆಟಗಳಾದ PUBg ಸೇರಿದಂತೆ 118 ಚೀನಾ ಮೂಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಅದೇ ಸಂದರ್ಭದಲ್ಲಿ, ಈ ಮೊಬೈಲ್ ಗೇಮ್‌ಅನ್ನು ಬಾಲಿವುಡ್ ಸೂಪರ್‌ಸ್ಟಾರ್ – ಅಕ್ಷಯ್ ಕುಮಾರ್ ಘೋಷಿಸಿದ್ದರು.

ಇದನ್ನೂ ಓದಿ: FAU-G – ಹೊಸ ಮೊಬೈಲ್ ಗೇಮ್ ಅನ್ನು ಘೋಷಿಸಿದ ನಟ ಅಕ್ಷಯ್ ಕುಮಾರ್!

ದಸರಾ ಸಂದರ್ಭದಲ್ಲಿ, FAU-G ಆಟದ ಟೀಸರ್ ಟ್ವಿಟ್ಟರ್ನಲ್ಲಿ ಬಿಡುಗಡೆಯಾಯಿತು. ಅದರಲ್ಲಿ ಗಾಲ್ವಾನ್ ವ್ಯಾಲಿ ನಕ್ಷೆಯು ಒಳಗೊಂಡಿತ್ತು. ಆದರೆ ನಿಜವಾದ ಆಟದ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಆದರೂ ಈ ಆಟ, ಭಾರತೀಯ ಗೇಮರ್ಸ್‌ಗಳಲ್ಲಿ ಒಂದು ಕಿಡಿಯನ್ನು ಸೃಷ್ಟಿಸಿತ್ತು.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ FAU-G ಮೊಬೈಲ್ ಗೇಮ್‌ ಪೂರ್ವ ನೋಂದಣಿ ಆರಂಭ

FAU-G ಆಟದ ಅಭಿವರ್ಧಕರು, ಟ್ವೀಟ್‌ನಲ್ಲಿ, ಇದನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಇದೀಗ, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ . ಅಭಿವರ್ಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಟಕ್ಕೆ ಪೂರ್ವ-ನೋಂದಣಿಯನ್ನು ಘೋಷಿಸಿದ್ದಾರೆ.

ನೀವೂ ನೋಂದಣಿ ಮಾಡಿ, ಆಟವು ಲೈವ್ ಆದ ಕೂಡಲೆ ಪ್ಲೇ ಸ್ಟೋರ್‌ನಿಂದ ನೋಟಿಫಿಕೇಶನ್ ಪಡೆಯಬಹುದಾಗಿದೆ.

FAU-G (Fearless And United Guards)

LEAVE A REPLY

Please enter your comment!
Please enter your name here