FAU-G – ಹೊಸ ಮೊಬೈಲ್ ಗೇಮ್ ಅನ್ನು ಘೋಷಿಸಿದ ನಟ ಅಕ್ಷಯ್ ಕುಮಾರ್!

0
151
Tap to know MORE!

ಪ್ರಧಾನಿ ಮೋದಿಯವರು ಚಾಲನೆ ನೀಡಿರುವ ಆತ್ಮನಿರ್ಭಾರ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, FAU-G (ಫೌ-ಜಿ) ಎಂಬ ಆಕ್ಷನ್ ಗೇಮ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಫಿಯರ್‌ಲೆಸ್ ಆಂಡ್ ಯುನೈಟೆಡ್-ಗಾರ್ಡ್ಸ್ (ಎಫ್‌ಎಯು-ಜಿ) ಮೂಲಕ ಗೇಮರ್ಸ್‌ಗಳಿಗೆ ಭಾರತೀಯ ಸೈನಿಕರ ತ್ಯಾಗದ ಬಗ್ಗೆ ಇನ್ನಷ್ಟು ತಿಳಿಸಲಿದೆ ಎಂದು ಅವರು ಘೋಷಿಸಿದರು. ಇದರ ಮೂಲಕ ಬರುವ ನಿವ್ವಳ ಆದಾಯದ ಶೇ.20 ರಷ್ಟನ್ನು, ಭಾರತೀಯ ಹುತಾತ್ಮರ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಭಾರತ್ ಕೆ ವೀರ್ ಟ್ರಸ್ಟ್‌ಗೆ ನೀಡಲಾಗುವುದು ಎಂದಿದ್ದಾರೆ.

ಇತ್ತೀಚೆಗಷ್ಟೇ, ಭಾರತ ಸರ್ಕಾರವು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಮತ್ತು ಭಾರತದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿ ಜನಪ್ರಿಯ ಆನ್‌ಲೈನ್ ಮಲ್ಟಿಪ್ಲೇಯರ್ ಆಟ PUB-G ಅನ್ನು ನಿಷೇಧಿಸಿತ್ತು. PUB-G ಜೊತೆಗೆ, ಚೀನಾದ 117 ಇತರ ಅಪ್ಲಿಕೇಶನ್‌ಗಳನ್ನು ಸಹ ನಿಷೇಧಿಸಲಾಗಿದೆ.

ಇದನ್ನೂ ನೋಡಿ : ಅಸ್ಸಾಂ ಪ್ರವಾಹ ಪರಿಹಾರಕ್ಕಾಗಿ ₹1 ಕೋಟಿ ನೀಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್

FAU-G ಅನ್ನು ಬೆಂಗಳೂರು ಮೂಲದ ಮೊಬೈಲ್ ಗೇಮ್ಸ್ ಮತ್ತು ಮನರಂಜನಾ ಕಂಪನಿಯಾದ ಎನ್ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದೆ.

LEAVE A REPLY

Please enter your comment!
Please enter your name here