FLASH| ಜೂನ್ 21 ರಿಂದ ಕೋವಿಡ್ ಲಸಿಕೆ ಎಲ್ಲರಿಗೂ ಉಚಿತ: ಪ್ರಧಾನಿ ಮೋದಿ

0
288
Tap to know MORE!

ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ.. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​ ಘೋಷಿಸಿದರು. ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಿಂದ ಇದು ಜಾರಿಯಾಗಲಿದೆ ಎಂದರು.

ಇನ್ನು ಮುಂದೆ ವ್ಯಾಕ್ಸಿನೇಷನ್​​ನ್ನು ಸೆಂಟ್ರಲೈಸ್ ಮಾಡಲಾಗುತ್ತಿದೆ. ರಾಜ್ಯಗಳಿಗೆ ವ್ಯಾಕ್ಸಿನ್ ಖರೀದಿಸಲು ನೀಡಿದ್ದ ಅವಕಾಶವನ್ನ ವಾಪಸ್ ತೆಗೆದುಕೊಳ್ಳುತ್ತೇವೆ. ಹಾಗೂ ಕೇಂದ್ರ ಸರ್ಕಾರವೇ ಇನ್ನುಮುಂದೆ ವ್ಯಾಕ್ಸಿನ್​ನ್ನು ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮೋದಿ ಭಾಷಣದ ಮುಖ್ಯಾಂಶಗಳು.. 

 • ಖಾಸಗಿ ಆಸ್ಪತ್ರೆಗಳಲ್ಲಿ150ಕ್ಕಿಂತ ಹೆಚ್ಚು ಸೇವಾ ಶುಲ್ಕ ಹಣ ಪಡೆಯುವಂತಿಲ್ಲ.
 • ಖಾಸಗಿ ಆಸ್ಪತ್ರೆಗಳು ನೇರವಾಗಿ ವ್ಯಾಕ್ಸಿನ್ ಖರೀದಿಸಬಹುದು.
  ಶೇಕಡಾ 25 ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು.
 • ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ
  ಒಬ್ಬನೇ ಭಾರತೀಯನೂ ಸಹ ಹಸಿವಿನಿಂದ ಮಲಗಬಾರದು
  ಬಜೆಟ್​ನಲ್ಲಿ ಮೀಸಲಿಡಲಾಗಿರುವ ಹಣವನ್ನು ವ್ಯಾಕ್ಸಿನ್ ಖರೀದಿಗೆ ಬಳಸಿಕೊಳ್ಳಲಾಗುವುದು.
 • ಕೊರೊನಾದ ಎರಡನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರನ್ನು ಕಳೆದುಕೊಂಡಿದ್ದೇವೆ.
  ಕಳೆದ ಹಲವು ವರ್ಷಗಳಲ್ಲಿ ಈ ರೀತಿಯ ಮಹಾಮಾರಿಯನ್ನು ನೋಡಿರಲಿಲ್ಲ.
 • ಕೊರೊನಾ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಟೆಸ್ಟಿಂಗ್ ನೆಟ್ವರ್ಕ್ ಸೇರಿದಂತೆ ಹೊಸ ಹೆಲ್ತ್ ಮೂಲಸೌಕರ್ಯ ತಯಾರಾಗಿದೆ.
 • ಭಾರತದಲ್ಲಿ ಮೆಡಿಕಲ್ ಆಕ್ಸಿಜನ್​ನ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯ್ತು. ಹಿಂದೆಂದೂ ಇಂಥ ಬೇಡಿಕೆ ಸೃಷ್ಟಿಯಾಗಿರಲಿಲ್ಲ.
 • ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು, ವಿಮಾನ, ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನ ಬಳಸಲಾಯ್ತು.
 • ಎಲ್ಲೆಲ್ಲಿ ಆಕ್ಸಿಜನ್ ಸಿಗ್ತಿತ್ತೋ ಅದನ್ನ ಹುಡುಕಿ ತರಲಾಯ್ತು. ಜೊತೆಗೆ ಆಕ್ಸಿಜನ್ ತಯಾರಿಕೆಯನ್ನೂ ಅಭಿವೃದ್ಧಿಪಡಿಸಿಕೊಳ್ಳಲಾಯ್ತು.
 • ಕೊರೊನಾದಂಥ ಅದೃಶ್ಯ ಮತ್ತು ರೂಪ ಬದಲಿಸುವ ಏಕೈಕ ಪ್ರಮುಖ ಅಸ್ತ್ರ ಕೊವಿಡ್ ಪ್ರೋಟೋಕಾಲ್.
 • ಈಗ ದೇಶದಾದ್ಯಂತ ವ್ಯಾಕ್ಸಿನ್​ಗೆ ಭಾರೀ ಬೇಡಿಕೆ ಇದೆ. ವ್ಯಾಕ್ಸಿನ್ ತಯಾರಿಸುತ್ತಿರುವ ದೇಶಗಳು ತುಂಬಾ ಕಡಿಮೆ ಇವೆ.
 • ನಮ್ಮ ದೇಶದಲ್ಲಿ ವ್ಯಾಕ್ಸಿನ್ ತಯಾರಿಸದಿದ್ದರೆ ಭಾರತದಂಥ ದೇಶವನ್ನ ರಕ್ಷಿಸುವುದು ಕಷ್ಟವಾಗ್ತಿತ್ತು.
 • ಮಿಷನ್ ಇಂಧ್ರಧನುಷ್​ ಲಾಂಚ್ ಮಾಡಲಾಯ್ತು. ಈ ಮೂಲಕ ದೇಶದಲ್ಲಿ ಯಾರ್ಯಾರಿಗೆ ವ್ಯಾಕ್ಸಿನ್ ನೀಡಬೇಕಿತ್ತು ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ವಿ.
 • ಜಗತ್ತಿನ ಮುಂದೆ ಮತ್ತೆ ಕೊರೊನಾ ವೈರಸ್ ಬಂತು ಈಗ ಭಾರತವನ್ನ ಕಾಪಾಡೋದು ಹೇಗೆ ಅನ್ನೋ ಚಿಂತೆ ಇತ್ತು.
  ದೇಶದಲ್ಲಿ ನಮಗೆ ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ತಯಾರಿಸುವ ವಿಶ್ವಾಸವಿತ್ತು.
 • ಕಳೆದ ವರ್ಷ ಏಪ್ರಿಲ್​ನಲ್ಲಿ ಕೆಲವು ಸಾವಿರ ಕೇಸ್ ಇದ್ದಾಗಲೇ ವ್ಯಾಕ್ಸಿನ್ ಟಾಸ್ಕ್ ರಚಿಸಲಾಯ್ತು.
 • ಈಗ ನೇಸಲ್​ ವ್ಯಾಕ್ಸಿನ್ ಕೂಡ ತಯಾರಾಗುತ್ತಿದೆ. ಅದು ಬಂದಲ್ಲಿ ಮತ್ತಷ್ಟು ವೇಗ ಹೆಚ್ಚಲಿದೆ. ವ್ಯಾಕ್ಸಿನ್ ತಯಾರಾದ ಮೇಲೂ ಕೆಲವು ದೇಶಗಳಲ್ಲಿ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿದೆ

LEAVE A REPLY

Please enter your comment!
Please enter your name here