FLASH | ನೂತನ ಸಚಿವರಿಗೆ ಖಾತೆ ಹಂಚಿಕೆ | ಯಾರಿಗೆ ಯಾವ ಖಾತೆ?

0
259
Tap to know MORE!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಇಂದು ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಯಾರು ಯಾರಿಗೆ ಯಾವ ಖಾತೆ ಎಂಬ ವಿವರ ಲಭ್ಯವಾಗಿದೆ.

ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿದ್ದ ಸಚಿವರಿಗೆ ಅದೇ ಖಾತೆಗಳನ್ನೇ ನೀಡಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಯಾರಿಗೆ ಯಾವ ಖಾತೆ?

  • ಸಿಎಂ ಬೊಮ್ಮಾಯಿ- ಹಣಕಾಸು, ಗುಪ್ತದಳ, ಬೆಂಗಳೂರು ನಗರಾಭಿವೃದ್ಧಿ
  • ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ಆ
  • ಆರ್.ಅಶೋಕ್ – ಕಂದಾಯ
  • ಬಿ.ಶ್ರೀರಾಮುಲು – ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿ
  • ವಿ.ಸೋಮಣ್ಣ – ವಸತಿ & ಮೂಲಭೂತ ಸೌಕರ್ಯ ಅಭಿವೃದ್ದಿ
  • ಬಿ.ಸಿ.ಪಾಟೀಲ್ – ಕೃಷಿ
  • ಎಸ್.ಟಿ.ಸೋಮಶೇಖರ್ – ಸಹಕಾರ
  • ಡಾ.ಕೆ.ಸುಧಾಕರ್ – ಆರೋಗ್ಯ,ವೈದ್ಯಕೀಯ ಶಿಕ್ಷಣ
  • ಕೆ.ಗೋಪಾಲಯ್ಯ – ಅಬಕಾರಿ
  • ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್
  • ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ
  • ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
  • ವಿ.ಸುನಿಲ್​ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ
  • ಉಮೇಶ್ ಕತ್ತಿ – ಅರಣ್ಯ, ಆಹಾರ & ನಾಗರೀಕ ಸರಬರಾಜು
  • ಜೆ.ಸಿ.ಮಾಧುಸ್ವಾಮಿ – ಸಣ್ಣ ನೀರಾವರಿ, ಕಾನೂನು
  • ಆರಗ ಜ್ಞಾನೇಂದ್ರ – ಗೃಹಖಾತೆ
  • ಡಾ.ಸಿ.ಎನ್.ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ
  • ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ
  • ಪ್ರಭು ಚೌಹಾಣ್ – ಪಶುಸಂಗೋಪಣೆ
  • ಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆ
  • ಶಿವರಾಮ್ ಹೆಬ್ಬಾರ್ – ಕಾರ್ಮಿಕ
  • ಎಸ್.ಅಂಗಾರ – ಮೀನುಗಾರಿಕೆ, ಬಂದರು
  • ಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
  • ಕೋಟ ಶ್ರೀನಿವಾಸ ಪೂಜಾರಿ – ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
  • ಕೆ.ಸಿ.ನಾರಾಯಣಗೌಡ – ಕ್ರೀಡೆ
  • ಮುನಿರತ್ನ – ತೋಟಗಾರಿಕೆ
  • ಭೈರತಿ ಬಸವರಾಜ್ – ನಗರಾಭಿವೃದ್ಧಿ
  • ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಸಿ.ಸಿ.ಪಾಟೀಲ್ – ಲೋಕೋಪಯೋಗಿ

LEAVE A REPLY

Please enter your comment!
Please enter your name here