FLASH| BiggBoss ಕನ್ನಡ ಅರ್ಧಕ್ಕೆ ತೆರೆ!

0
198
Tap to know MORE!

2021ರ ಆರಂಭದಲ್ಲಿ ಕರ್ನಾಟಕದಲ್ಲಿ ಕೊರೊನಾ ವೈರಸ್​ ನಿಯಂತ್ರಣದಲ್ಲಿತ್ತು. ಈ ಕಾರಣಕ್ಕೆ ಕಲರ್ಸ್​ ಕನ್ನಡ ವಾಹಿನಿ ಬಿಗ್​ ಬಾಸ್ ಕನ್ನಡ​ ಸೀಸನ್​ 8 ಆರಂಭಿಸಿತ್ತು. ಫೆಬ್ರವರಿ 28ರಂದು ಸೀಸನ್​ 8 ಗ್ರ್ಯಾಂಡ್​ ಓಪನಿಂಗ್​ ಪಡೆದುಕೊಂಡಿತ್ತು. ಆದರೆ, ಮಾರ್ಚ್​​ ನಂತರದಲ್ಲಿ ಕೊರೊನಾ ಕೇಸ್​ ಮಿತಿಮೀರುತ್ತಿದೆ. ಹೀಗಾಗಿ, ಕಠಿಣ ಲಾಕ್​ಡೌನ್​ ಘೋಷಣೆ ಮಾಡಿದೆ. ಇದರಿಂದ ಬಿಗ್​ ಬಾಸ್​ ಸೀಸನ್​ 8ಅನ್ನು ವಾಹಿನಿ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಕೈಗೊಂಡಿದೆ.

ಬಿಗ್​ ಬಾಸ್​ ಮನೆ ಒಳಗೆ ತೆರಳುವ ಸ್ಪರ್ಧಿಗಳು ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗೋದು ಕಡ್ಡಾಯವಾಗಿತ್ತು. ಅಲ್ಲದೆ, ಬಿಗ್​ ಬಾಸ್​ ಕೆಲಸಕ್ಕಾಗಿ ನೇಮಕಗೊಂಡ ಸಿಬ್ಬಂದಿ ಕೂಡ ಕೊವಿಡ್​ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿತ್ತು. ಆದರೆ, ಸರ್ಕಾರದ ನಿಯಮದಂತೆ ಬಿಗ್​ ಬಾಸ್​ ಬಾಸ್​ ನಿಲ್ಲಿಸಲೇಬೇಕಾದ ಪರಿಸ್ಥಿತಿ ಬಂದೊದಗಿದೆ.

UPDATE| ಮೇ 10 ರಿಂದ 14 ದಿನಗಳ ಕಾಲ ಕರ್ನಾಟಕದಲ್ಲಿ ಲಾಕ್‌ಡೌನ್ | ಏನಿರುತ್ತೆ, ಏನಿರಲ್ಲ?

ಕಳೆದ ಬಾರಿ ಕೊರೊನಾ ಕರ್ಫ್ಯೂ ವೇಳೆ ಬೆಳಗ್ಗೆ 6-12 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಿತ್ತು. ಅಲ್ಲದೆ, ಜನರ ಓಡಾಟಕ್ಕೂ ಅಷ್ಟಾಗಿ ಕಠಿಣ ನಿರ್ಬಂಧ ಇರಲಿಲ್ಲ. ಹೀಗಾಗಿ, ಧಾರಾವಾಹಿಗಳನ್ನು ಒಳಾಂಗಣದಲ್ಲಿ ಶೂಟಿಂಗ್​ ನಡೆಸುತ್ತಿದ್ದವು. ಆದರೆ, ಈ ಬಾರಿ ಸರ್ಕಾರ ಅದನ್ನು ಹಿಂಪಡೆದಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡಿ, ಒಳಾಂಗಣ ಶೂಟಿಂಗ್​ಗೆ ಯಾವುದೇ ರೀತಿಯ ಅವಕಾಶ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಕಲರ್ಸ್​ ವಾಹಿನಿ ಅರ್ಧಕ್ಕೆ ಶೋ ನಿಲ್ಲಿಸಿದೆ. 100 ದಿನ ತಲುಪುವ ಮೊದಲೇ ಸ್ಪರ್ಧಿಗಳು ಆಚೆ ಬಂದಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಕೆ.ಪಿ., ಮಂಜು ಪಾವಗಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ಪ್ರಿಯಾಂಕಾ ತಿಮ್ಮೇಶ್​, ನಿಧಿ ಸುಬ್ಬಯ್ಯ ಇದ್ದರು. ಇವರೆಲ್ಲರಿಗೂ ಈಗ ನಿರಾಸೆ ಉಂಟಾಗಿದೆ.

ಇತಿಹಾಸದಲ್ಲಿ ಈ ರೀತಿ ಶೋ ಅರ್ಧಕ್ಕೆ ನಿಂತಿದ್ದು ಇದೇ ಮೊದಲು. ಈ ಮೊದಲು ಮೊದಲನೇ ಅಲೆ ಕಾಣಿಸಿಕೊಂಡಾಗ ಮಲಯಾಳಂನಲ್ಲಿ ಬಿಗ್​ ಬಾಸ್​ಅನ್ನು ಅರ್ಧಕ್ಕೆ ನಿಂತಿತ್ತು. ಈಗ ಕನ್ನಡದಲ್ಲೂ ಅದು ಮರುಕಳಿಸಿದೆ.ಐಪಿಎಲ್​ ಸೀಸನ್​ 14 ಏಪ್ರಿಲ್​ ತಿಂಗಳಲ್ಲಿ ಆರಂಭಗೊಂಡಿತ್ತು. ಆದರೆ, ಕೊರೊನಾ ಕಾರಣದಿಂದ ಪಂದ್ಯವನ್ನು ಅರ್ಧಕ್ಕೆ ರದ್ದು ಮಾಡಲಾಗಿತ್ತು. ಈಗ ಬಿಗ್​ ಬಾಸ್​ ಕೂಡ ಅದೇ ಹಾದಿ ಹಿಡಿದಿದೆ.

LEAVE A REPLY

Please enter your comment!
Please enter your name here