ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರೊಂದಿಗೆ ಚಲನಚಿತ್ರ ಮತ್ತು ದೂರದರ್ಶನ ಕಾರ್ಯಕ್ರಮಗಳ ಪ್ರೊಡಕ್ಷನ್ ಪುನರಾರಂಭಿಸಲು ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಪ್ರಕಟಿಸಿದ್ದಾರೆ.
ಎಸ್ಒಪಿ ಪ್ರಕಾರ, ಕ್ಯಾಮೆರಾಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮಾತ್ರ ನಟರು ಮಾಸ್ಕ್ ನಿಂದ ವಿನಾಯಿತಿ ಪಡೆಯಬಹುದು.
ಸೆಟ್ಗಳಲ್ಲಿ ಫೇಸ್ ಮಾಸ್ಕ್ ಕಡ್ಡಾಯವಾಗಿರುತ್ತದೆ. ಸೆಟ್ಗಳಲ್ಲಿ ಸಂದರ್ಶಕರು ಮತ್ತು ಪ್ರೇಕ್ಷಕರನ್ನು ಅನುಮತಿಸಲಾಗುವುದಿಲ್ಲ. 6-ಅಡಿ ದೈಹಿಕ ದೂರವನ್ನು ಅನುಸರಿಸಬೇಕಾಗುತ್ತದೆ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಮುಖ್ಯಾಂಶಗಳು
● ಕ್ಯಾಮೆರಾ ಮುಂದೆ ಬರುವ ವೇಳೆ ಬಿಟ್ಟರೆ, ಬೇರೆಲ್ಲಾ ಸಮಯದಲ್ಲೂ, ಎಲ್ಲಾ ಸ್ಥಳಗಳಲ್ಲೂ ಫೇಸ್ ಮಾಸ್ಕ್ ಮತ್ತು ಕೈಗವಸುಗಳು (ಗ್ಲೌಸ್) ಕಡ್ಡಾಯ
● ಆಗಾಗ ಕೈ ತೊಳೆಯುವ ಅಭ್ಯಾಸ ಮಾಡಬೇಕು
● ಸಿನೆಮಾ ಸೆಟ್ಗೆ ಹೋಗುವಾಗ, ಹಿಂದೆ ಬರುವಾಗ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು
● ಯಾವ ಪ್ರದೇಶದಲ್ಲೂ ಉಗುಳುವುದು ನಿಷೇಧ
● ಆರೋಗ್ಯ ಸೇತು ಅಪ್ಲಿಕೇಶನ್ನ ಬಳಕೆಗೆ ಸೂಚನೆ
● ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ – ಶೂಟಿಂಗ್ ಪ್ರದೇಶಗಳಿಗೆ ಸೋಂಕಿನ ರೋಗಲಕ್ಷಣವಿಲ್ಲದ ವ್ಯಕ್ತಿಗಳಿಗೆ ಮಾತ್ರ ಅವಕಾಶ
● ಸಾಧ್ಯವಾದಷ್ಟು ಕನಿಷ್ಟ 6 ಅಡಿಗಳಷ್ಟು ದೈಹಿಕ ಅಂತರವನ್ನು ಕಾಪಾಡಬೇಕು
● ಸಾಮಾಜಿಕ ಅಂತರದೊಂದಿಗೆ ಆಸನ ವ್ಯವಸ್ಥೆ
● ಸಿನೆಮಾ ಟಿಕೆಟ್ಗಳು ಆನ್ಲೈನ್ ಬುಕಿಂಗ್ ಇ -ವಾಲೆಟ್ಗಳು, ಕ್ಯೂಆರ್ ಕೋಡ್ ಸ್ಕ್ಯಾನರ್ಗಳು ಇತ್ಯಾದಿ
● ಶೂಟಿಂಗ್ ಪ್ರದೇಶವನ್ನು , ಬಳಸುತ್ತಿರುವ ಸಾಮಾಗ್ರಿಗಳನ್ನು ಆಗಾಗ ನೈರ್ಮಲ್ಯೀಕರಣ, ಸ್ಯಾನಿಟೈಜ್ ಮಾಡುವುದು
● ಒಂದು ವೇಳೆ ಅಲ್ಲಿದ್ದ ಒಬ್ಬರಿಗೆ ಸೋಂಕು ದೃಢವಾದರೆ, ಅವರೊಂದಿಗಿದ್ದ ಎಲ್ಲರೂ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅನಾರೋಗ್ಯದ ಬಗ್ಗೆ ವರದಿ ಮಾಡುವುದು ಕಡ್ಡಾಯ
● ಶೂಟಿಂಗ್ ಸಮಯ ಸಾರ್ವಜನಿಕರಿಗೆ ಪ್ರವೇಶವಿಲ್ಲ
● ಬಟ್ಟೆ, ಮೇಕಪ್ ಕಿಟ್, ಇತ್ಯಾದಿಗಳನ್ನು ಇತರರೊಂದಿಗೆ ಹಂಚುವುದನ್ನು ಕಡಿಮೆಗೊಳಿಸಬೇಕು
[…] […]